ಹರಾಜಾಗದ ಟಿಪ್ಪು ಸುಲ್ತಾನ್ ಬಳಸಿದ್ದ ಖಡ್ಗ: ಇದರ ಮೌಲ್ಯ ಬರೋಬ್ಬರಿ 20 ಕೋಟಿ ರೂ.!
04:58 PM Oct 27, 2023 IST
|
thinkbigh
ಬೆಂಗಳೂರು, ಅಕ್ಟೋಬರ್ 27, 2023 (www.justkannada.in): ಟಿಪ್ಪು ಸುಲ್ತಾನ್ ವೈಯಕ್ತಿಕ ಖಡ್ಗವನ್ನು ಹರಾಜಿನಲ್ಲಿ ಕೊಳ್ಳಲು ಯಾರೂ ಮುಂದೆ ಬಂದಿಲ್ಲ.
ಹೌದು, ಪ್ರಸಿದ್ಧ ಬ್ರಿಟಿಷ್ ಹರಾಜು ಸಂಸ್ಥೆಯಾದ ಕ್ರಿಸ್ಟೀಸ್ ಹರಾಜಿನಲ್ಲಿ ಟಿಪ್ಪು ಖಡ್ಗ ಹರಾಜಾಗದೇ ಹಾಗೆಯೇ ಉಳಿದಿದೆ.
ಟಿಪ್ಪುವಿನ ಈ ಖಡ್ಗದ ಮೌಲ್ಯ 1.5 ಮಿಲಿಯನ್ ಪೌಂಡ್ (15 ಕೋಟಿ ರೂ.) ಮತ್ತು 2 ಮಿಲಿಯನ್ ಪೌಂಡ್ (20 ಕೋಟಿ ರೂ.) ಎಂದು ಅಂದಾಜಿಸಲಾಗಿದೆ.
ಶ್ರೀರಂಗಪಟ್ಟಣದ ಪತನದ ನಂತರ, ಈ ಖಡ್ಗವನ್ನು ಭಾರತದ ಮಾಜಿ ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ಚಾರ್ಲ್ಸ್ ಕಾರ್ನ್ವಾಲಿಸ್ಗೆ ಉಡುಗೊರೆಯಾಗಿ ನೀಡಲಾಗಿತ್ತು.
ಮೇ ತಿಂಗಳಲ್ಲಿ ಬೊನ್ಹಾಮ್ಸ್ನ ಲಂಡನ್ ಹರಾಜಿನಲ್ಲಿ ಟಿಪ್ಪುವಿನ ಬೆಡ್ ಚೇಂಬರ್ ಖಡ್ಗವು 14 ಮಿಲಿಯನ್ ಪೌಂಡ್ (141 ಕೋಟಿ ರೂ.) ಗೆ ಮಾರಾಟವಾಯಿತು. ಅಂತಿಮವಾಗಿ ಟಿಪ್ಪುವಿನ ನಗರಕ್ಕೆ ಮುತ್ತಿಗೆ ಹಾಕಿದ ಮೇಜರ್ ಜನರಲ್ ಬೇರ್ಡ್ ಖಡ್ಗವನ್ನು ಸ್ವೀಕರಿಸಿದ್ದರು.
Next Article