For the best experience, open
https://m.justkannada.in
on your mobile browser.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ವಿಶ್ವಕಪ್ ಫೈನಲ್ ಗೆ ಕ್ಷಣಗಣನೆ

06:12 PM Jun 29, 2024 IST | prashanth
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ 20 ವಿಶ್ವಕಪ್ ಫೈನಲ್ ಗೆ ಕ್ಷಣಗಣನೆ

ಬಾರ್ಬಡೋಸ್,ಜೂನ್,29,2024 (www.justkannada.in): 2024ರ ಟಿ-20 ವಿಶ್ವಕಪ್​ ಕ್ರಿಕೆಟ್​ ಟೂರ್ನಿ ಅಂತಿಮ ಹಂತಕ್ಕೆ ತಲುಪಿದ್ದು, ಇಂದಿನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಎದುರಾಗಲಿವೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ವೆಸ್ಟ್ ಇಂಡೀಸ್​ನ ಬಾರ್ಬಡೋಸ್ ಮೈದಾನ ಈ ಪಂದ್ಯ ನಡೆಯುತ್ತಿದ್ದು ಗೆದ್ದ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ.

ಬಾರ್ಬಡೋಸ್‌ನಲ್ಲಿ 2024 ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಆಡಲಿದೆ. ಬಾರ್ಬಡೋಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಇದು ಎರಡನೇ ಪಂದ್ಯವಾಗಿದೆ. ಇದಕ್ಕೂ ಮುನ್ನ ಬಾರ್ಬಡೋಸ್‌ನಲ್ಲಿಯೇ ಸೂಪರ್-8ರಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿತ್ತು.

ಇನ್ನು ಭಾರತ ತಂಡ ಟಿ-20 ವಿಶ್ವಕಪ್ ನಲ್ಲಿ 10 ವರ್ಷದ ಬಳಿಕ ಫೈನಲ್ ಪ್ರವೇಶಿಸಿದ್ದು ಟ್ರೋಫಿ ಎತ್ತಿ ಹಿಡಿಯುವ ತವಕದಲ್ಲಿದೆ. ಟೀಂ ಇಂಡಿಯಾ ಗೆಲುವಿಗಾಗಿ ದೇಶಾದ್ಯಂತ ಶುಭಹಾರೈಕೆ, ಪೂಜೆ ಸಲ್ಲಿಸಲಾಗುತ್ತಿದೆ. ಕ್ಯಾಪ್ಟನ್ ರೋಹಿತ್ ನೇತೃತ್ವದ ಭಾರತ ತಂಡ ಈ ವಿಶ್ವಕಪ್ ನಲ್ಲಿ ಒಂದೇ ಒಂದು ಪಂದ್ಯ ಸೋತಿಲ್ಲ ಹಾಗೆಯೇ ದಕ್ಷಿಣ ಆಫ್ರಿಕಾ ತಂಡವೂ ಸಹ ಯಾವುದೇ ಪಂದ್ಯಗಳಲ್ಲಿ ಸೋಲನುಭವಿಸಿಲ್ಲ. ಹೀಗಾಗಿ ಎರಡು ತಂಡಗಳ ನಡುವಿನ ಫೈಟ್ ಕುತೂಹಲ ಮೂಡಿಸಿದೆ.

ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

 ತಂಡಗಳು ಹೀಗಿದೆ.

ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಯಜ್ವೇಂದ್ರ ಚಹಾಲ್, ಸಂಜು ಸ್ಯಾಮ್ಸನ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್​), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ, ಒಟ್ನೀಲ್ ಬಾರ್ಟ್‌ಮನ್, ಜೆರಾಲ್ಡ್ ಕೋಟ್ಜೆ ಫಾರ್ಟುಯಿನ್, ರಯಾನ್ ರಿಕೆಲ್ಟನ್.

Key words:  T20 World Cup, final, India, South Africa

Tags :

.