For the best experience, open
https://m.justkannada.in
on your mobile browser.

 ನೀಟ್‌ ʼರದ್ದಿʼಗೆ ತಮಿಳುನಾಡು ವಿಧಾನಸಭೆ ನಿರ್ಣಯ.

06:34 PM Jun 28, 2024 IST | prashanth
 ನೀಟ್‌ ʼರದ್ದಿʼಗೆ ತಮಿಳುನಾಡು ವಿಧಾನಸಭೆ ನಿರ್ಣಯ

ಚೆನ್ನೈ, ಜೂನ್ 28,2024 (www.justkannada.in0: . : ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ರದ್ದುಪಡಿಸಬೇಕು ಮತ್ತು 12 ನೇ ತರಗತಿಯ ಅಂಕಗಳ ಆಧಾರದ ಮೇಲೆ ರಾಜ್ಯ ಸರ್ಕಾರಗಳು ವೈದ್ಯಕೀಯ ಪ್ರವೇಶವನ್ನು ನಡೆಸುವ ಹಿಂದಿನ ವ್ಯವಸ್ಥೆ ಮರುಸ್ಥಾಪಿಸಬೇಕು ಎಂದು ತಮಿಳುನಾಡು ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಸರ್ವಾನುಮತದಿಂದ ಅಂಗೀಕರಿಸಿದೆ.
NEET -UG 2024 ಪರೀಕ್ಷೆಯಲ್ಲಿ ಪೇಪರ್ ಸೋರಿಕೆ ಮತ್ತು NEET-PG 2024 ಪರೀಕ್ಷೆ ಹಠಾತ್ ಮುಂದೂಡಿದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ವಿಧಾನಸಭೆಯಲ್ಲಿ ಈ ನಿರ್ಣಯ ಮಂಡಿಸಿದರು.
ಮನಿತನೇಯ ಮಕ್ಕಳ್ ಕಚ್ಚಿ, ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ, ತಮಿಳಗ ವೆಟ್ರಿ ಕಳಗಂ, ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸೇರಿದಂತೆ ಹಲವಾರು ಪ್ರಾದೇಶಿಕ ಪಕ್ಷಗಳು ನಿರ್ಣಯವನ್ನು ಬೆಂಬಲಿಸಿದವು.
ಇದಕ್ಕೂ ಮೊದಲು, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಕೆ. ಕನಿಮೊಳಿ ಅವರು ದೇಶಾದ್ಯಂತ ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( ಎನ್.ಟಿ.ಎ) ನಡೆಸಿದ ನೀಟ್‌ ನಿಂದ ತಮಿಳುನಾಡಿಗೆ "ವಿನಾಯಿತಿ" ನೀಡುವ ಬೇಡಿಕೆಯನ್ನು ಪುನರುಚ್ಚರಿಸಿದರು.
ನಮಗೆ ನೀಟ್‌ ಬೇಡ ಎಂದು ತಮಿಳುನಾಡು ನಿರಂತರವಾಗಿ ಹೇಳುತ್ತಿದೆ . ನೀಟ್ ನ್ಯಾಯಯುತ ಪರೀಕ್ಷೆಯಲ್ಲ ಎಂಬುದು ಈಗ ಸಾಬೀತಾಗಿದೆ ಮತ್ತು ನೀಟ್‌ನಿಂದ ವಿದ್ಯಾರ್ಥಿಗಳು ತುಂಬಾ ಕಳೆದುಕೊಳ್ಳುತ್ತಿದ್ದಾರೆ" ಎಂದು ಕನಿಮೊಳಿ ತಿಳಿಸಿದರು.

key words:  Tamil Nadu Assembly Passes Resolution Urging Centre To Abolish NEET

Tags :

.