For the best experience, open
https://m.justkannada.in
on your mobile browser.

ಟ್ಯಾಂಕರ್ ಡಿಕ್ಕಿ : ಉರುಳಿ ಬಿದ್ದ ಖಾಸಗಿ ಶಾಲಾ ಬಸ್.

10:47 AM Feb 10, 2024 IST | prashanth
ಟ್ಯಾಂಕರ್ ಡಿಕ್ಕಿ   ಉರುಳಿ ಬಿದ್ದ ಖಾಸಗಿ ಶಾಲಾ ಬಸ್

ಮೈಸೂರು,ಫೆಬ್ರವರಿ,10,2024(www.justkannada.in): ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಶಾಲೆ ಮಿನಿ ಬಸ್ಸ್  ಉರುಳಿಬಿದ್ದು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮದ ಬಳಿ  ನಡೆದಿದೆ.  

ಸಾಲಿಗ್ರಾಮ- ಭೇರ್ಯ ಹೆದ್ದಾರಿಯಲ್ಲಿ ಬರುವ ಕುರುಬಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ.  ಸಾಲಿಗ್ರಾಮ ತಾಲ್ಲೂಕಿನ ಮಿರ್ಲೆ ಗ್ರಾಮದ ಸಿಇಟಿ ಖಾಸಗಿ ಶಾಲೆಗೆ ಸೇರಿ ಮಿನಿ ಬಸ್ಸ್ ಗೆ  ಟ್ಯಾಂಕರ್ ಡಿಕ್ಕಿಯಾಗಿದೆ. ಭೇರ್ಯ ಗ್ರಾಮದ ಕಡೆಯಿಂದ ಸಾಲಿಗ್ರಾಮಕ್ಕೆ ತೆರಳುತ್ತಿದ್ದ  ಟ್ಯಾಂಕರ್ ಕುರುಬಹಳ್ಳಿ ಗ್ರಾಮದಿಂದ ಇದೇ ಮಾರ್ಗವಾಗಿ ಶಾಲಾ ಮಕ್ಕಳನ್ನು ತುಂಬಿಕೊಂಡು ಮಿರ್ಲೆ ಗ್ರಾಮಕ್ಕೆ ಹೋಗುತ್ತಿದ್ದ ಮಿನಿ ಬಸ್ಸ್ ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಮಿನಿ ಬಸ್ಸ್ ರಸ್ತೆಯಲ್ಲಿ ಉರುಳಿ ಬಿದ್ದಿದೆ.

ಇನ್ನು ಮಿನಿ ಬಸ್ಸ್ ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಯಗೊಂಡ ಮಕ್ಕಳನ್ನು ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Tanker-collision- private school -bus -overturned.

Tags :

.