HomeBreaking NewsLatest NewsPoliticsSportsCrimeCinema

ಶಿಕ್ಷಕರ ಪ್ರಶಸ್ತಿ ತಡೆ ವಿಚಾರ: ಸರ್ಕಾರದ ವಿರುದ್ದ ಶಾಸಕ ಶ್ರೀವತ್ಸ ಆಕ್ರೋಶ

03:14 PM Sep 05, 2024 IST | prashanth

ಮೈಸೂರು,ಸೆಪ್ಟಂಬರ್,5,2024 (www.justkannad.in): ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ ಅವರಿಗೆ  ನೀಡಿದ್ದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಸರ್ಕಾರ ತಡೆ ನೀಡಿದಕ್ಕೆ ಸರ್ಕಾರದ ವಿರುದ್ದ ಬಿಜೆಪಿ ಶಾಸಕ ಶ್ರೀವತ್ಸ ಅವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ವಿಚಾರಕ್ಕೆ ಶಿಕ್ಷಕರ ಪ್ರಶಸ್ತಿ ತಡೆ ವಿಚಾರ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಶಾಸಕ ಶ್ರೀವತ್ಸ, ಇದು ಹಿಂದೂ ವಿರೋಧಿ ಕೋಮುವಾದಿ ನಿರ್ಧಾರ. ಸಂಜೆಯ ಒಳಗೆ ಶಿಕ್ಷಕರಿಗೆ ಪ್ರಶಸ್ತಿ ನೀಡಬೇಕು ಮಾತು ಎತ್ತಿದರೆ ಬಿಜೆಪಿ ಕೋಮುವಾದಿ ಅಂತ ಹೇಳುವ ಕಾಂಗ್ರೆಸ್ ಈ ರೀತಿ ನಡೆಗೆ ಏನೆಂದು ಹೇಳಬೇಕು. ಇಲ್ಲವಾದರೆ ಇದನ್ನು ವಿರೋಧಿಸುವಂತೆ ಶಿಕ್ಷಕರಿಗೆ ಕರೆ ನೀಡುತ್ತೇವೆ ಪಕ್ಷದ ಹಿರಿಯರ ಜೊತೆ ಚರ್ಚೆ ನಡೆಸಿ ಪ್ರತಿಭಟನೆ ನಡೆಸಲಾಗುವುದು. ವಿದ್ಯಾರ್ಥಿಗಳು ಶಿಕ್ಷಕರಲ್ಲಿ ಕೋಮಭಾವನೆ ಬಿತ್ತುವ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರ ಏನು ಮಾಡುತ್ತಿದೆ ಅನ್ನೋದು ಸಿಎಂ ಶಿಕ್ಷಕಣ ಸಚಿವರಿಗೆ ಗೊತ್ತಾಗುತ್ತಿಲ್ಲ. ಸರ್ಕಾರದ ನಿರ್ಧಾರಗಳು ಸಿಎಂ ಗಮನಕ್ಕೆ ಬರುತ್ತಿಲ್ಲ. ಪ್ರಶಸ್ತಿ ಘೋಷಣೆ ಮಾಡುವ ಮುನ್ನ ಏಕೆ ಈ ಬಗ್ಗೆ ಯೋಚಿಸಿಲ್ಲ.ಘೋಷಣೆ ಮಾಡಿದ ನಂತರ ತಡೆ ಹಿಡಿದಿರುವುದು ಏಕೆ ? ಮುಡಾ ಆಯುಕ್ತರಾಗಿದ್ದ ದಿನೇಶ್ ಆಯುಕ್ತರ ವರ್ಗಾವಣೆ ವಿಚಾರದಲ್ಲೂ ಇದೇ ರೀತಿ ಆಗಿದೆ ಸಿಎಂ ವರ್ಗಾವಣೆ ಗೊತ್ತಿದೆ ಅಲ್ಲಿರುವ ವಿಚಾರ ಗೊತ್ತಿಲ್ಲ ಅಂತಾರೆ ಎಂದು ಕಿಡಿಕಾರಿದರು.

ಗೌರಿ ಗಣೇಶ ಹಬ್ಬ ಆಚರಣೆಗೆ ಅನವಶ್ಯಕ ನಿರ್ಬಂಧ ಹೇರಬಾರದು

ಗೌರಿ ಗಣೇಶ ಹಬ್ಬದ ಆಚರಣೆಗೆ ಅನವಶ್ಯಕ ನಿರ್ಬಂಧ ಹೇರಬಾರದು. ನಮ್ಮ ಹಬ್ಬ ನಮ್ಮ ನಂಬಿಕೆ ಆಚರಣೆಗೆ ನಿರ್ಬಂಧ ಹಾಕಬಾರದು. ಅನುಮತಿ ಪಡೆಯಲೇ ಬೇಕು ಎಂಬ ಕಟ್ಟಾಜ್ಞೆ ಬೇಡ. ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ತಗೆದುಕೊಳ್ಳಬಾರದು ಅದಕ್ಕೆ ಅನುಮತಿ ಪಡೆದು ಹಬ್ಬ ಆಚರಿಸಿ. ಪೋಲಿಸರು ಯಾವುದಾದರೂ ಸಮಸ್ಯೆ ಒಡ್ಡಿದರೆ ಜನರ ಪರವಾಗಿ ನಾನು ನಿಲ್ಲುತ್ತೇನೆ. ಬೇರೆಯವರಿಗಿಲ್ಲದ ನಿರ್ಬಂಧ ನಮಗೇಕೆ.? ನಾನು ಸಂಜೆ ಪೋಲಿಸ್ ಕಮಿಷನರ್ ಭೇಟಿ ಮಾಡುತ್ತೇ‌ನೆ ಎಂದು ಶಾಸಕ ಶ್ರೀವತ್ಸ ತಿಳಿಸಿದ್ದಾರೆ.

Key words: teachers' awards, MLA Srivatsa, against, government

Tags :
againstgovernmentMLA Srivatsateachers' awards
Next Article