ತೆಲಂಗಾಣ ಚುನಾವಣೆ: ಸಿಎಂ ಚಂದ್ರಶೇಖರ್ ರಾವ್’ಗೆ ಹಿನ್ನಡೆ
11:27 AM Dec 03, 2023 IST
|
thinkbigh
ಬೆಂಗಳೂರು, ಡಿಸೆಂಬರ್ 03, 2023 (www.justkannada.in): ಸಾಕಷ್ಟು ಕುತೂಹಲ ಮೂಡಿಸಿರುವ ತೆಲಂಗಾಣ ವಿಧಾನ ಸಭಾ ಚುನಾವಣೆಯಲ್ಲಿ ಸಿಎಂ ಕೆ ಚಂದ್ರಶೇಖರ್ ರಾವ್ ಹಿನ್ನಡೆ ಅನುಭವಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಚಂದ್ರಶೇಖರ್ ರಾವ್ ಅವರು ಕಾಮರೆಡ್ಡಿ ಮತ್ತು ಗಜೈಲ್ ಕ್ಷೇತ್ರಗಳಲ್ಲಿ ತಮ್ಮ ಎರಡೂ ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಒಂದೇ ಹಂತದಲ್ಲಿ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. 119 ಸ್ಥಾನಗಳಲ್ಲಿ 60 ಸ್ಥಾನ ಗೆದ್ದ ಪಕ್ಷ ಅಧಿಕಾರಕ್ಕೆ ಬರಲಿದೆ.
ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ 71 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಬಿಎಸ್ ಆರ್ ಪಕ್ಷ 38ರಲ್ಲಿ ಮುನ್ನಡೆ ಗಳಿಸಿದೆ. ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ 60 ರಿಂದ 70 ಸ್ಥಾನ ಪಡೆಯಲಿದೆ ಎಂದು ಹೇಳಿವೆ.
Next Article