ಸೆಕ್ಯೂರಿಟಿ ಏಜೆನ್ಸಿಗೆ ಶಿಕ್ಷಕರ ನೇಮಕಾತಿ ಟೆಂಡರ್: ಬಿಬಿಎಂಪಿ ನಡೆಗೆ ಸುರೇಶ್ ಕುಮಾರ್ ಆಕ್ರೋಶ
ಬೆಂಗಳೂರು, ಮೇ 27,2024 (www.justkannada.in): ಶಾಲಾ ಶಿಕ್ಷಕರ ನೇಮಕಾತಿಯನ್ನ ಸೆಕ್ಯೂರಿಟಿ ಏಜೆನ್ಸಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ನೀಡಿದ್ದು ಬಿಬಿಎಂಪಿಯ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ತನ್ನ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ 700 ಶಿಕ್ಷಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಶಿಕ್ಷಕರ ನೇಮಕಾತಿ ಹೊರಗುತ್ತಿಗೆಯನ್ನು ಪಾಲಿಕೆ ಸೆಕ್ಯೂರಿಟಿ ಸಂಸ್ಥೆಗೆ ನೀಡಿದೆ. ಬಿಬಿಎಂಪಿಯ ಈ ನಿರ್ಧಾರಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಸುರೇಶ್ ಕುಮಾರ್ ಕಿಡಿ.
ಬಿಬಿಎಂಪಿಯ ಈ ನಡೆಗೆ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ಮತ್ತು ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ನಮ್ಮ ವ್ಯವಸ್ಥೆ ಎಂತಹ ಸ್ಥಿತಿ ತಲುಪಿತು. ಬಿಬಿಎಂಪಿ ಕೈಗೊಂಡಿರುವ ನಿರ್ಧಾರ ವಿಚಿತ್ರ ವೈಖರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
Key words: tender, teachers, recruitment, Suresh Kumar, BBMP