For the best experience, open
https://m.justkannada.in
on your mobile browser.

ಡ್ರಗ್‌ ಮಾಫಿಯ ತಡೆಯುವಲ್ಲಿ ಸರಕಾರ ವಿಫಲ : ಸಿಎಂ ಸ್ಟಾಲಿನ್ ವಿರುದ್ಧ ನಟ ವಿಜಯ್ ನೇರ ದಾಳಿ.

02:18 PM Jun 28, 2024 IST | mahesh
ಡ್ರಗ್‌ ಮಾಫಿಯ ತಡೆಯುವಲ್ಲಿ ಸರಕಾರ ವಿಫಲ   ಸಿಎಂ ಸ್ಟಾಲಿನ್ ವಿರುದ್ಧ ನಟ ವಿಜಯ್ ನೇರ ದಾಳಿ

ಚೆನ್ನೈ, July 28, 2024: (www.justkannada.in news )ತಮಿಳುನಾಡಿನಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಿಸುವಲ್ಲಿ ಪ್ರಸ್ತುತ ಸರ್ಕಾರ "ದಯನೀಯವಾಗಿ" ವಿಫಲವಾಗಿದೆ ಎಂದು ನಟ ವಿಜಯ್‌ ಆರೋಪಿಸಿದ್ದಾರೆ.

ಈಗಾಗಲೇ ರಾಜಕೀಯಕ್ಕೆ ಪ್ರವೇಶದ ಬಗ್ಗೆ ಇಂಗಿತ ವ್ಯಕ್ತಪಡಿಸಿರುವ ನಟ ವಿಜಯ್‌ ಅವರ ಈ ಹೇಳಿಕೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ವಿರುದ್ಧ ನೇರ ದಾಳಿ ಎಂದು ಪರಿಗಣಿಸಲಾಗಿದೆ.

ರಾಜ್ಯದಲ್ಲಿ ಡ್ರಗ್ಸ್ ಅನ್ನು ಹತ್ತಿಕ್ಕುವ ಬದಲಿಗೆ ಅದನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಹಾವಳಿ ನಿಯಂತ್ರಿಸಲು ಡಿಎಂಕೆ ಸರ್ಕಾರ "ಏನೂ ಮಾಡುತ್ತಿಲ್ಲ" ಎಂದು ನಟ ವಿಜಯ್ ಆರೋಪಿಸಿದ್ದಾರೆ.

ಯುವಕರನ್ನು ಮಾದಕ ವಸ್ತುಗಳಿಂದ ರಕ್ಷಿಸುವುದು ಸರಕಾರದ ಕರ್ತವ್ಯ ಎಂದ ಅವರು, ರಾಜ್ಯದಲ್ಲಿ ಉತ್ತಮ ನಾಯಕರ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಟ ವಿಜಯ್‌ ರಾಜಕೀಯಕ್ಕೆ ಧುಮುಕಲು ಯೋಜಿಸುತ್ತಿದ್ದಾರೆ ಎಂಬ ವರದಿಗಳ ಮಧ್ಯೆ ಈ ಹೇಳಿಕೆ ಬಂದಿವೆ.

60 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಇತ್ತೀಚಿನ ಕಳ್ಳಭಟ್ಟಿ ದುರಂತದ ಕುರಿತು ಡಿಎಂಕೆ ಸರ್ಕಾರ ಕಠಿಣ ಸವಾಲು ಎದುರಿಸುತ್ತಿರುವ ಸಮಯದಲ್ಲಿ ಈ ಹೇಳಿಕೆ ಬಂದಿದೆ.

key words: Tamil actor, Thalapathy Vijay, direct attack to, cm Stalin, regarding, drug mafia, in Tamilnadan.

Tags :

.