HomeBreaking NewsLatest NewsPoliticsSportsCrimeCinema

ಒಂದನೇ ತರಗತಿಗೆ ದಾಖಲಾಗುವ ಮಗುವಿನ ವಯಸ್ಸನ್ನು 6 ವರ್ಷಕ್ಕೆ ನಿಗದಿ : ಇದು ಕೇಂದ್ರದ ಸರ್ವಾಧಿಕಾರದ ಆದೇಶ.

12:28 PM Apr 12, 2024 IST | mahesh

ಮೈಸೂರು, ಏ. 12, 2024 : (www.justkannada.in news) ಕೇಂದ್ರ ಸರ್ಕಾರ ಒಂದನೇ ತರಗತಿಗೆ ದಾಖಲಾಗುವ ಮಗುವಿನ ವಯಸ್ಸನ್ನು ಇದ್ದಕ್ಕಿದ್ದ ಹಾಗೆ 6 ವರ್ಷಕ್ಕೆ ನಿಗದಿಪಡಿಸಿರುವುದು ಅವೈಜ್ಞಾನಿಕ ಮತ್ತು ಮಕ್ಕಳ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸಿದೆ ಎಂದು ಮೈಸೂರು ನಗರಪಾಲಿಕೆ ಮಾಜಿ ಸದಸ್ಯ  ಹಾಗೂ  ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೆ.ವಿ.ಮಲ್ಲೇಶ್‌ ಆಕ್ಷೇಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕೆ.ವಿ.ಮಲ್ಲೇಶ್‌ ಹೇಳಿರುವುದಿಷ್ಟು..

ಈ ಕುರಿತು ಕೇಂದ್ರ ಸರ್ಕಾರ ಸಾರ್ವಜನಿಕವಾಗಿ ಯಾವುದೇ ಚರ್ಚೆ ಮತ್ತು ಸಂವಾದ ನಡೆಸದೆ ಏಕಾಏಕಿ ಒಂದನೇ ತರಗತಿಗೆ ದಾಖಲಾಗುವ ಮಗುವಿನ ವಯಸ್ಸನ್ನು 6 ವರ್ಷಕ್ಕೆ ನಿಗದಿಪಡಿಸಿ ಸರ್ವಾಧಿಕಾರದ ಆದೇಶವನ್ನು ಹೊರಡಿಸಿದೆ. ಇದು ಈಗಾಗಲೇ ಎಲ್.ಕೆ.ಜಿ ಮತ್ತು ಯು.ಕೆ.ಜಿ ಓದುತ್ತಿರುವ ಮಕ್ಕಳ ಎಳೆಯ ಮನಸ್ಸಿನ ಮೇಲೆ ಕಲಿಕಾ ಆಘಾತದ ಪರಿಣಾಮ ಬೀರಲಿದೆ. ಮಗು ಮತ್ತೆ ಅದೇ ತರಗತಿಯಲ್ಲಿ ಓದುವ ದುಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರಲಿದೆ.

ಕೇಂದ್ರ ಸರ್ಕಾರ ಮಗುವಿನ 6ನೇ ವರ್ಷಕ್ಕೆ ಒಂದನೇ ತರಗತಿಗೆ ದಾಖಲಿಸುವ ವಿಚಾರವಾಗಿ ಏಕಾಏಕಿ ಯಾವುದೇ ಪೂರ್ವ ತಯಾರಿಯಿಲ್ಲದೆ ಮತ್ತು ಸಾರ್ವಜನಿಕರ ಗಮನಕ್ಕೆ ತರದೇ ಆದೇಶ ಹೊರಡಿಸಿರುವುದು ಮಕ್ಕಳ ಮೇಲಿನ ಕಲಿಕಾ ದೌರ್ಜನ್ಯವೇ ಸರಿ.

ಇತ್ತೀಚೆಗೆ ಕೇಂದ್ರ ಸರ್ಕಾರ ಸಾರ್ವಜನಿಕ ನೀತಿ-ನಿರೂಪಣೆಯನ್ನು ಮಾಡುವಾಗ ಪ್ರಜೆಗಳನ್ನು ಅಂಧಕಾರದಲ್ಲಿಟ್ಟು ತಾನು ಮಾಡಿದ್ದೇ ಸರಿ ಎನ್ನುವ ಸರ್ವಾಧಿಕಾರದ ಧೋರಣೆ ಹೊಂದಿರುವುದು ಭಾರತದಂತಹ ವಿಶಾಲವಾದ ಭೂಭಾಗದಲ್ಲಿ ಬರುವ ರಾಜ್ಯಗಳು-ಭಾಷೆಗಳು ಮತ್ತು ವೈವಿಧ್ಯತೆಯಿಂದ ಕೂಡಿರುವ ದೇಶದ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನೇ ಸರಿ.

"ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು" ಎಂಬ ನಾಣ್ಣುಡಿಯಂತೆ ಭವ್ಯಭಾರತದ ಮಕ್ಕಳ ಉಜ್ವಲ ಭವಿಷ್ಯವನ್ನು ಈ ಅವೈಜ್ಞಾನಿಕ ಆದೇಶ ತಿಂದುಹಾಕುತ್ತಿದೆ.

 

ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಎಂ. ಲಕ್ಷ್ಮಣ್ ಗೆಲ್ಲಿಸಿ- ಕಾಂಗ್ರೆಸ್ ಮಾಜಿ ಮೇಯರ್ ಗಳ ಮನವಿ.

ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಎರಡು ವರ್ಷಗಳ ವಿನಾಯಿತಿ (2025-26ನೇ ಸಾಲಿನಿಂದ ಆರಂಭಿಸಲು) ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಕೇಂದ್ರದಿಂದ ಇದುವರೆವಿಗೂ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಬಂದಿರುವುದಿಲ್ಲ. ತನ್ನ ಈ ಹಿಂದಿನ ಅವೈಜ್ಞಾನಿಕ ಆದೇಶಕ್ಕೆ ಬದ್ಧವಾಗಿರುವುದು ದುರಂತವೇ ಸರಿ.

ಈಗಲೂ ಸಮಯ ಮೀರಿಲ್ಲ. ಕೇಂದ್ರ ಸರ್ಕಾರ ಎಚ್ಚೆತ್ತು ತನ್ನ ಪ್ರಮಾದವನ್ನು ಸರಿಪಡಿಸಲು ಮನವಿ ಮಾಡುತ್ತೇನೆ. ಪೋಷಕರೂ ಕೂಡ ಟಿಟ್ಟರ್ ಇಲ್ಲವೇ ಫೇಸ್ ಬುಕ್ ನಲ್ಲಿ #ಟ್ಯಾಗ್ ಬಳಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

key words :  The age of a child,  enrolled in Class I,  has been fixed,  at 6 years,  This is a dictatorial order,  of the Centre.

ENGLISH SUMMARY : 

K.V. Mallesh, former Mysuru City Corporation (MCC) member and President of Aniketana Seva Trust, has objected to the central government's sudden decision to fix the age of a child enrolled in Class I at six years as unscientific and curtails the right to education of children.

Though the Karnataka state government has already written to the Central government seeking a two-year exemption (starting from 2025-26), there has been no positive response from the Centre so far. It is a tragedy to stick to its earlier unscientific order.

 

Tags :
at 6 yearsenrolled in Class Ihas been fixedof the Centre.The age of a childThis is a dictatorial order
Next Article