For the best experience, open
https://m.justkannada.in
on your mobile browser.

ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು.

05:59 PM May 17, 2024 IST | prashanth
ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು

ರಾಮನಗರ,ಮೇ,17,2024 (www.justkannada.in):  ನದಿಯಲ್ಲಿ ಈಜಲು ಇಳಿದಿದ್ದ ಮೂವರು ಬಾಲಕರು  ನೀರು ಪಾಲಾಗಿರುವ  ಘಟನೆ ರಾಮನಗರದಲ್ಲಿ ನಡೆದಿದೆ.

ಅಚಲು ಗ್ರಾಮದ ಬೆಟ್ಟದ ಸಮೀಪದಲ್ಲಿ ಈ ಘಟನೆ ಸಂಭವಿಸಿದೆ. ಸಬಾದ್ (14), ಸುಲ್ತಾನ್ (13), ರಿಯಾಜ್ ಖಾನ್ (15) ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕರು.  ಮೂವರು ಕೂಡ ರಾಮನಗರದ ಮೆಹಬೂಬ್ ನಗರದ ನಿವಾಸಿಗಳು ಎನ್ನಲಾಗಿದೆ.

ಶಾಲೆಗೆ ರಜೆ ಇದ್ದ ಕಾರಣ 8 ಮಂದಿ ಸಹಪಾಟಿಗಳು ಅಚ್ಚಲು ಗ್ರಾಮದ ಬಳಿಯ ಬೆಟ್ಟದ ನದಿಯಲ್ಲಿ ಈಜಲು ತೆರಳಿದ್ದರು .ಈ ವೇಳೆ ಮೂವರು ವಿದ್ಯಾರ್ಥಿಗಳು ಈಜಲು ಇಳಿದಿದ್ದು, ಈ ಸಂದರ್ಭದಲ್ಲಿ ಈಜು ಬಾರದೆ ಮೂವರು ನೀರುಪಾಲಾಗಿದ್ದಾರೆ.  ಮೃತದೇಹವನ್ನ ಹೊರ ತೆಗೆಯಲಾಗಿದೆ. ಈ ಕುರಿತು ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  three boys , death ,swimming , drowned.

Tags :

.