For the best experience, open
https://m.justkannada.in
on your mobile browser.

ಮೂರು ಹೊಸ ಅಪರಾಧ ಕಾನೂನು ಜಾರಿ: ವಿಳಂಬ ಬದಲಿಗೆ ತ್ವರಿತ ವಿಚಾರಣೆ, ತ್ವರಿತ ನ್ಯಾಯ- ಕೇಂದ್ರ ಗೃಹ ಸಚಿವ ಅಮಿತ್ ಶಾ

02:56 PM Jul 01, 2024 IST | prashanth
ಮೂರು ಹೊಸ ಅಪರಾಧ ಕಾನೂನು ಜಾರಿ  ವಿಳಂಬ ಬದಲಿಗೆ ತ್ವರಿತ ವಿಚಾರಣೆ  ತ್ವರಿತ ನ್ಯಾಯ  ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ ಜುಲೈ, 1,2024 (www.justkannada.in): ದೇಶದಲ್ಲಿ ಇಂದಿನಿಂದ  ಮೂರು ಹೊಸ ಅಪರಾಧ ಕಾನೂನು ಜಾರಿಯಾಗಿದ್ದು, ವಿಳಂಬ ಬದಲಿಗೆ ತ್ವರಿತ ವಿಚಾರಣೆ, ತ್ವರಿತ ನ್ಯಾಯ ಆಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನುಡಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ,  ದೇಶ ಸ್ವಾತಂತ್ರ್ಯ ಪಡೆದು ಸರಿಸುಮಾರು 77 ವರ್ಷಗಳ ನಂತರ, ಅಪರಾಧ ನ್ಯಾಯ ವ್ಯವಸ್ಥೆಯು ಈಗ ಸಂಪೂರ್ಣವಾಗಿ ‘ಸ್ವದೇಶಿ’ ಆಗಿದೆ.  ಭಾರತೀಯ ಮೌಲ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಹೊಸ ಕ್ರಿಮಿನಲ್ ಕಾನೂನುಗಳು ಸಂತ್ರಸ್ತರ ಪರ ಮತ್ತು ನ್ಯಾಯ ಆಧಾರಿತವಾಗಿವೆ ಎಂದು ಹೇಳಿದ್ದಾರೆ.

ಈ ಮೊದಲು ಪೊಲೀಸರ ಹಕ್ಕುಗಳನ್ನಷ್ಟೆ ರಕ್ಷಿಸಲಾಗಿತ್ತು. ಈಗ ಸಂತ್ರಸ್ತರು ಮತ್ತು ದೂರುದಾರರ ಹಕ್ಕು ರಕ್ಷೆ ಮಾಡಲಾಗುತ್ತದೆ.  ದೂರದೃಷ್ಠಿ ಇಟ್ಟುಕೊಂಡು 3 ಹೊಸ ಕಾನೂನು ಜಾರಿ ಮಾಡಲಾಗಿದೆ. ಕಾನೂನಿನ ಪ್ರಕಾರ ಗ್ಯಾಂಗ್ ರೇಪ್ ಗೆ 20 ವರ್ಷ ಜೈಲು ಅಥವಾ ಜೀವಾವಧಿ ನೀಡಲಾಗುತ್ತದೆ. ನ್ಯಾಯ ವ್ಯವಸ್ಥೆ ಸಂಪೂರ್ಣ ಸ್ವದೇಶಿ ಆಗುತ್ತಿದೆ. ದಂಡ ಬದಲಿಗೆ ಈಗ “ನ್ಯಾಯ” ಆಗಿದೆ. ವಿಳಂಬದ ಬದಲಿಗೆ, ತ್ವರಿತ ವಿಚಾರಣೆ ಮತ್ತು ತ್ವರಿತ ನ್ಯಾಯ ಇರುತ್ತದೆ, ಮೊದಲು, ಪೊಲೀಸರ ಹಕ್ಕುಗಳನ್ನು ಮಾತ್ರ ರಕ್ಷಿಸಲಾಗಿದೆ ಆದರೆ ಈಗ, ಸಂತ್ರಸ್ತರು ಮತ್ತು ದೂರುದಾರರ ಹಕ್ಕುಗಳನ್ನು ಸಹ ರಕ್ಷಿಸಲಾಗುತ್ತದೆ. ” ಎಂದು ಅಮಿತ್ ಶಾ ಹೇಳಿದ್ದಾರೆ.

Key words: Three ,new, criminal, law,Union Home Minister, Amit Shah

Tags :

.