For the best experience, open
https://m.justkannada.in
on your mobile browser.

BIG BREAKING NEWS: ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಭಾರತೀಯ ಸೇನೆ.

08:07 PM Jun 12, 2024 IST | mahesh
big breaking news  ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಭಾರತೀಯ ಸೇನೆ

Three Terrorists, have been, shot dead ,by Indian Army

ನವ ದೆಹಲಿ, ಜೂ.12,2024: (www.justkannada.in news) ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ.

ಭಾರತೀಯ ಸೇನೆಯು ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು. ರಿಯಾಸಿಯಲ್ಲಿ ಭಯೋತ್ಪಾಧಕರು ಹಿಂದೂ ಯಾತ್ರಾರ್ಥಿಗಳ ಮೇಲೆ ದಾಳಿ ಮಾಡಿ ಹತ್ಯೆಗೈದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ಪ್ರತಿದಾಳಿ ನಡೆಸಿದೆ.

ರಿಯಾಸಿ, ಕಥುವಾ ಮತ್ತು ದೋಡಾದಲ್ಲಿ ಮೂರು ದಿನಗಳಲ್ಲಿ ಮೂರು ಭಯೋತ್ಪಾದಕ ದಾಳಿಗಳ ನಂತರ ಇದೀಗ ಭಾರತೀಯ ಸೇನೆಯ ವತಿಯಿಂದ ದೊಡ್ಡ ಕಾರ್ಯಾಚರಣೆ ನಡೆಯುತ್ತಿದೆ.

ಘಟನೆಗೆ ಸಂಬಧಿಸಿದಂತೆ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಭಾರತೀಯರ ಮೇಲೆ ದಾಳಿ ನಡೆಸಿ ಹತ್ಯೆಗೈದ ಯಾರನ್ನೂ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.

Key words: Three Terrorists, have been, shot dead ,by Indian Army

Summary:

BIG OPERATION UNDERWAY after three terror attacks in three days in Reasi, Kathua & Doda. HM Amit Shah has announced No one will be spared.

Tags :

.