ಮೈಸೂರು ಅರಮನೆ ವೀಕ್ಷಣೆಗೆ ಇನ್ಮುಂದೆ ವಾಟ್ಸ್ ಆಪ್ ನಲ್ಲೇ ಟಿಕೆಟ್
ಮೈಸೂರು,ಆಗಸ್ಟ್, 14,2024 (www.justkannada.in): ಮೈಸೂರು ಅರಮನೆ ವೀಕ್ಷಣೆಗೆ ಇನ್ಮುಂದೆ ವಾಟ್ಸ್ ಆಪ್ ನಲ್ಲೇ ಟಿಕೆಟ್ ಖರೀದಿಗೆ ಅವಕಾಶ ನೀಡಲಾಗಿದೆ.
ಇಂದಿನಿಂದ ಟಿಕೆಟ್ ದೊರೆಯಲಿದ್ದು, ಪ್ರವಾಸಿಗರಿಗೆ ಅರಮನೆ ವೀಕ್ಷಣೆಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಈ ತೀರ್ಮಾನ. ತೆಗೆದುಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್) ವತಿಯಿಂದ ಮೊಬೈಲ್ ಒನ್ ಯೋಜನೆಯ ಮೂಲಕ ಮೈಸೂರು ಅರಮನೆಯನ್ನು ವೀಕ್ಷಿಸಲು ನಾಗರಿಕರು ಸಮಯ ಮತ್ತು ಶ್ರಮವನ್ನು ಉಳಿಸಲು ಹಾಗೂ ಅತಿ ಸುಲಭವಾಗಿ ಮೈಸೂರು ಅರಮನೆ ವೀಕ್ಷಿಸಲು ಮೊಬೈಲ್ ಮೂಲಕ ಟಿಕೆಟ್ ಖರೀದಿಸಲು ವಾಟ್ಸಪ್ ಟಿಕೆಟಿಂಗ್ ತಂತ್ರಾಂಶವನ್ನು ಸರ್ಕಾರದ ಇಡಿಸಿಎಸ್ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿದೆ.
ಹೀಗಾಗಿ ಇಂದಿನಿಂದ ಸರ್ಕಾರದ ಇಡಿಸಿಎಸ್ ಮೊಬೈಲ್ ಒನ್ ಯೋಜನೆಯ ಮೂಲಕ ಮೊಬೈಲ್ ನಲ್ಲೆ ಟಿಕೆಟ್ ಖರೀದಿ ಮಾಡಬಹುದಾಗಿದೆ. ವಾಟ್ಸ್ ಆಪ್ ನಲ್ಲಿ ಮೊ. 8884160088 ಗೆ ಎಜಿ ಎಂದು ಟೈಪ್ ಮಾಡುವ ಮೂಲಕ ಟಿಕೆಟ್ ಪಡೆಯಬಹುದು.
ಅರಮನೆ ಮಂಡಳಿಯ ವೆಬ್ ಸೈಟ್ https://Mysorepalace.karnagaka.gov.in ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಟಿಕೆಟ್ ಖರೀದಿಸಬಹುದು. ಟಿಕೆಟ್ ಖರೀದಿಸಿದ 5 ದಿನದವರೆಗೆ ಅರಮನೆ ವೀಕ್ಷಣೆಗೆ ಮಾನ್ಯತೆ ಇರಲಿದೆ. ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಅರಮನೆಯನ್ನು ವೀಕ್ಷಿಸಬಹುದಾಗಿರುತ್ತದೆ ಎಂದು ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Ticket, Mysore Palace, available, WhatsApp