For the best experience, open
https://m.justkannada.in
on your mobile browser.

ಟೈಗರ್ ನಾಗ್ ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ

10:44 AM Feb 08, 2024 IST | prashanth
ಟೈಗರ್ ನಾಗ್ ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು.ಫೆಬ್ರವರಿ,8,2024(www.justkannada.in): ಸಾಧನೆ ಸಾಧಕನ ಸ್ವತ್ತೆ ಹೊರತು ಸೋಮಾರಿಯಾ ಸೊತ್ತಲ್ಲ ಎಂಬ ಗಾದೆ ಮಾತಿದೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅನೇಕ ನೋವು ದುಃಖ ದುಮ್ಮಾನಗಳನ್ನು ಅನುಭವಿಸಿಕೊಂಡೆ ಬಂದಿರುತ್ತಾರೆ ನಮ್ಮ ಕನ್ನಡ ಚಿತ್ರರಂಗ ಚಂದನವನದಲ್ಲಿ ಅನೇಕರು ಕಷ್ಟಪಟ್ಟು ಮೇಲೆ ಬಂದು ಚಿತ್ರರಂಗದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ ಅಂತಹ ಅವರ ಪಟ್ಟಿಯಲ್ಲಿ ಕಲ್ಪತರು ನಾಡು ತುಮಕೂರು ಜಿಲ್ಲೆಯ ಸಂಜೀವಿನಿ, ಕಮನಿಯ ಕ್ಷೇತ್ರ ಕೊರಟಗೆರೆ ತಾಲೂಕಿನ ಹೋರಾಟಗಾರನೊಬ್ಬ ಹಠಕ್ಕೆ ಬಿದ್ದು ಚಿತ್ರವೊಂದನ್ನು ನಿರ್ಮಿಸಿ ಅದಕ್ಕೆ ಇದೀಗ ಮೂರು ಅಂತರಾಷ್ಟ್ರೀಯ ಪ್ರಶಸ್ತಿಗಳು ಸಂದಿರುವುದು ಶ್ಲಾಘನೀಯವಾಗಿದ್ದು ಅಡವಿ ಚಿತ್ರದ ಮೂಲಕ ಹೋರಾಟಗಾರನೊಬ್ಬನ ಜೀವನ ಕಹಾನಿ ಹೊರ ಬಿದ್ದಂತಾಗಿದೆ.

ಬಡತನದಲ್ಲಿ ಬೆಂದು ಬೆಳೆದ ಹುಡುಗನೊಬ್ಬ ಸಮಾಜದ ಕೆಟ್ಟ ಆಚರಣೆಗಳು ದಬ್ಬಾಳಿಕೆಯ ವಿರುದ್ಧ ತಮ್ಮ ಸ್ನೇಹಿತರೊಡನೆ ಹೋರಾಟಗಳನ್ನು ರೂಪಿಸಿ ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿ ಅನೇಕ ಕಾರಾಣಿ ಭೂತಗಳಿಗೆ ಯುವಕ ಸಾಕ್ಷಿಯಾಗುತ್ತಾನೆ ಆ ಯುವಕನೇ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮದ ಟೈಗರ್ ನಾಗ್ ನಾಡಿನಲ್ಲಿ ನಡೆಯುತ್ತಿದ್ದ ದೌರ್ಜನ್ಯ ಗುಲಾಮಗಿರಿಯ ವಿರುದ್ಧ ಸಿಡಿದೆದ್ದ ಈ ನಾಯಕ ಗುಲಾಮಗಿರಿ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಎಲ್ಲರಿಗೂ ಚಿರಪರಿಚಿತನಾಗುತ್ತಾನೆ ಇದೀಗ ಕೆಲ ಭೂಗಳ್ಳರು ಓತ್ತುವರಿ ನೆಪದಲ್ಲಿ ರೈತರ ಜಮೀನುಗಳನ್ನು ಕಬಳಿಸುತ್ತಿರುವುದನ್ನು ಕಂಡ ಟೈಗರ್ ನಾಗ ಅವರು ನೈಜ್ಯ ಘಟನೆ ಆಧಾರದ ಮೇಲೆ ಇದೀಗ ಅಡವಿ ಎಂಬ ಚಿತ್ರವನ್ನು ಸ್ಥಳೀಯ ಸ್ನೇಹಿತರು ಹಾಗೂ ಇತರರೊಟ್ಟಿಗೆ ಸೇರಿ ನಿರ್ಮಿಸಿ ಇದೀಗ ತೆರೆಯ ಮೇಲೆ ತರಲು ಸಿದ್ಧಪಡಿಸಿದ್ದು ಇದೀಗ ಅಡವಿ ಚಿತ್ರ ಪ್ರೀಮಿಯರ್ ಶೋ ಕಂಡು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.

ದಟ್ಟಣೆಯ ಜನರ ಜೀವನ ಶೈಲಿ ಬದುಕು ಬವಣೆ ಅವರ ಪ್ರೀತಿ ವಿಶ್ವಾಸಗಳಿಗೆ ದಕ್ಕೆಯಾದಾಗ ಯುವಕ ನೋಡುವ ಅಡವಿ ಜನರ ಪರ ಹೋರಾಟ ರೂಪಿಸಿ ಕಾನೂನಿನ ಅಡಿಯಲ್ಲಿ ನ್ಯಾಯ ಕೊಡಿಸುವ ಕಥಾ ಅಂದರೆ ಅಡವಿ ಚಿತ್ರದ ಕಥೆಯಾಗಿದ್ದು ಇಂತಹ ಚಿತ್ರ ಬಿಡುಗಡೆಗು ಮುನ್ನವೇ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಚಿತ್ರ ಸ್ಪರ್ಧೆಯಲ್ಲಿ ಅಡವಿ ಚಲನಚಿತ್ರ ಅತ್ಯುತ್ತಮ ಗೀತೆ ರಚನೆ, ಕಥೆ, ಖಳನಟನ ಸೇರಿದಂತೆ ಮೂರು ವಿಭಾಗಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುವುದು ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ, ಆಂಧ್ರಪ್ರದೇಶದ ತಿರುಪತಿ ಟ್ರಸ್ಟ್ ಮತ್ತು ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ (ಐ ಎಫ್ ಎಂ. ಎ ) ಆಯೋಜಿಸಿದ್ದ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ತಿರುಪತಿ
ಇಲ್ಲಿ ಅತ್ಯುತ್ತಮ ಕಥೆ. ಅತ್ಯುತ್ತಮ ಗೀತರಚನೆ ಅತ್ಯುತ್ತಮ ಖಳನಟ ಹೀಗೆ ಮೂರು ವಿಭಾಗಗಳಲ್ಲಿ ಅಡವಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಅಡವಿ ಚಿತ್ರವು ವಿಭಿನ್ನ ಕಥಾಹಂದರವನ್ನು ಹೊಂದಿದ್ದು ಪರಿಸರ ರಕ್ಷಣೆ ಹಾಗೂ ಆದಿವಾಸಿಗಳ ಬದುಕಿನ ಮೂಲ ಭೂತ ಸಮಸ್ಯೆ ಹಾಗೂ ಸಂವಿಧಾನದ ಹರಿವು ಮೂಡಿಸುವುದರ ಬಗ್ಗೆ ದ್ವನಿ ಎತ್ತಿದ್ದು ಚಿತ್ರದ ಹಾಡುಗಳು ಹಾಗೂ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ 90 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಚಿತ್ರ ರಸಿಕರು. ಪರಿಸರ ಪ್ರೇಮಿಗಳು ಚಿಂತಕರು ಸಾಹಿತಿಗಳು ಪ್ರಗತಿಪರ ರನ್ನು ದಿನದಿಂದ ದಿನಕ್ಕೆ ಸೆಳೆಯುತ್ತಿದೆ.
ಇದೀಗ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಕಥೆ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ. ಟೈಗರ್ ನಾಗ್ ಅವರು ಅಡವಿ ಕಾದಂಬರಿ ಬರೆದು ಕರ್ನಾಟಕ ರಾಜ್ಯದ ಗೃಹ ಮಂತ್ರಿಗಳು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರು ಆದ ಡಾ ಜಿ ಪರಮೇಶ್ವರ ಅವರಿಂದ ಬಿಡುಗಡೆ ಮಾಡಿಸಲಾಗಿತ್ತು ತುಮಕೂರು ಜಿಲ್ಲೆಯಲ್ಲಿ ನೆಡೆಯುವ ಸಿನಿಮಾದ ಕಥೆಗೆ ಅತ್ಯುತ್ತಮ ಕಥೆಗಾರ ಎಂದು ಟೈಗರ್ ನಾಗ್ ಆಯ್ಕೆಯಾಗಿ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ ಕನ್ನಡ ಚಿತ್ರರಂಗದ ದಶಕಗಳಿಂದ ಇದ್ದ ಸಮಸ್ಯೆ ಸೆನ್ಸಾರ್ ಅಧಿಕಾರಿಯನ್ನು ಸಿಬಿಐ ಡ್ರಾಪ್ ಮಾಡಿಸಿ ಚಿತ್ರರಂಗದ ಮೆಚ್ಚುಗೆಗೆ ಪಾತ್ರರಾಗಿ ಎಲ್ಲರ ಗಮನ ಸೆಳೆದಿದ್ದ ಇವರು ಅಂತರಾಷ್ಟ್ರೀಯ ಪ್ರಶಸ್ತಿಗೆ ಭಜನರಾಗಿದ್ದಾರೆ ಚಂದನವನದ ಖ್ಯಾತ ಹಿರಿಯ ಸಾಹಿತಿ ವಿ ಮನೋಹರ್ ಅವರು ಅಡವಿ ಚಿತ್ರಕಾಗಿ ಬರೆದ ಹಾಡಿಗೆ ಅತ್ಯುತ್ತಮ ಗೀತ ರಚನೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ವಿ ಮನೋಹರ ಅವರು ಚಂದನವನದಲ್ಲಿ ಈಗಾಗಲೇ 2500 ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದು ಅವರಿಗೆ ಸಂದ ಈ ಪ್ರಶಸ್ತಿ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಸಂದ ಗೌರವವಾಗಿದೆ. ಉದಯೋನ್ಮುಖ ಪ್ರತಿಭೆ ಅರ್ಜುನ್ ಪಾಳೇಗಾರ ಅಡವಿ ಚಿತ್ರದಲ್ಲಿನ ತಮ್ಮ ನಟನೆಗಾಗಿ ಅತ್ಯುತ್ತಮ ಖಳ ನಟ ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ ಹಾಗೂ ಮುಂಬರುವ ಹಲವಾರುಚಿತ್ರಗಳಲ್ಲಿ ವಿವಿಧ ಶೇಡ್ ಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರತಿ ಬಿಂಬಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಭರವಸೆಯ ನಟ ಅರ್ಜುನ್ ಪಾಳೆಗಾರ್ ಅವರಿಗೆ ಪ್ರಶಸ್ತಿ ಲಬಿಸಿರುವುದು ಚಂದನ ವನದ ಉದಯೋನ್ಮುಖ ಪ್ರತಿಭೆಗಳ ಮುಕುಟಕ್ಕೆ ಮೆರುಗು ನೀಡಿದಂತಾಗಿದೆ.

ಆಂಧ್ರಪ್ರದೇಶದ ತಿರುಪತಿಯ ಮಾಹಿತಿ ಸಭಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಸಮಾರಂಭದಲ್ಲಿ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅಡವಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಟೈಗರ್ ನಾಗ್ ಅಡವಿ ಚಿತ್ರಕ್ಕೆ ಲಭಿಸಿದ ಪ್ರಶಸ್ತಿಯನ್ನು ದೇಶದ ಹೆಮ್ಮೆಯ ಸಂವಿಧಾನಕ್ಕೆ, ಹಾಗೂ ಪರಮಪೂಜ್ಯ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಅರ್ಪಿಸಿದ್ದೇನೆ ಕಾರಣ ಶೂದ್ರನಾಗಿ ಮುಂದೆ ಮಡಿಕೆ ಹಿಂದೆ ಪೊರಕೆ ಕಟ್ಟಿಕೊಂಡು ಸುತ್ತಬೇಕಿದ್ದವನಿಗೆ, ಇಂದು ಸಂವಿಧಾನದ ಶಕ್ತಿಯಿಂದ ಎಲ್ಲರಂತೆ ಸಮಾನತೆಯಿಂದ ಬದುಕಲು ಅವಕಾಶ ಸಿಕ್ಕಿದೆ, ಈ ಅವಕಾಶದಿಂದ ನಾನು ನಿರ್ದೇಶಕ, ನಿರ್ಮಾಪಕ ಕೂಡ ಆಗಿದ್ದೇನೆ, ಬುದ್ಧ ಬಸವ ಅಂಬೇಡ್ಕರ್ ಕುವೆಂಪು ಕನಕದಾಸರು ಪೆರಿಯಾರ್ ಹಾಗೂ ಸಮಾನತೆಗಾಗಿ ಧ್ವನಿ ಎತ್ತಿದ ಎಲ್ಲಾ ಮಹನೀಯರ ಅನುಯಾಯಿ ಗಳೆಲ್ಲರ ಸಹಕಾರ ಬೆಂಬಲ ಮಾರ್ಗದರ್ಶನದಿಂದ ನಮ್ಮ ಸಂವಿಧಾನ ಸಿನಿ ಕಂಬೈನ್ಸ್ ಸಂಸ್ಥೆ ಹಾಗೂ ಮಧುಗಿರಿ ಸಾಧಿಕ್ ಸಾಬ್ ನಿರ್ಮಾಣದ ಅಡವಿ ಚಿತ್ರಕ್ಕೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ, ನಮ್ಮೆಲ್ಲಾ ಮುಂದಿನ ಪ್ರಯತ್ನಗಳಿಗೆ ನಿಮ್ಮ ಸಹಕಾರ ಹೀಗೇ ಇರಲಿ ಎಂದರು.

ಚಿರದಲ್ಲಿ ನಾಯಕ ಮೋಹನ್ ಮೌರ್ಯ, ನಟಿ ಶಿಲ್ಪ, ನಟಿ ಆರುಂದತಿ ಲಾಲ್, ರಾಮ ನಾಯಕ್ ಟೈಗರ್ ನಾಗ್, ಅರ್ಜುನ್ ಪಾಳೇಗಾರ, ರವಿಕುಮಾರ ಸನ, ರಥಾವರ ದೇವು, ಮಂಜೀವ, ವೃಶ್ಚಿಕ. ಚಿರು ಶ್ರೀ ನಾಗ್ ಶಿಲ್ಪ ಟೈಗರ್ ನಾಗ್,ಹರಾ ಮಹಿಷಾ ಬೌದ್ಧ ಜಗದೀಶ್ ಮಹದೇವ್. ವಾಲೆ ಚಂದ್ರಣ್ಣ, ಆರ್ ಅನಂತರಾಜು, ಮತ್ತಿತರರು ನಟಿಸಿದ್ದಾರೆ.

ವಿಪಿಂದ್ ವಿ ರಾಜ್ ಛಾಯಾಗ್ರಹಣ, ಮಂಜು ಮಹಾದೇವ್ ಸಂಗೀತ, ಕೆ. ಮಂಜು ಕೋಟೇಕೆರೆ ಹಾಗೂ ಟೈಗರ್ ನಾಗ್ ಸಂಭಾಷಣೆ, ಸಂಜೀವ್ ರೆಡ್ಡಿ ಸಂಕಲನ. ಕೆ. ಮಂಜು ಕೋಟೆಕೆರೆ ಸಹನಿರ್ದೇಶನ, ಬಾಬು ಖಾನ್ ಕಲಾ ನಿರ್ದೇಶನ, ಎ. ವಿ. ವಿಜಯಕುಮಾರ್ ನಿರ್ಮಾಣ ನಿರ್ವಹಣೆ, ಎ ಆರ್ ಸಾಯಿರಾಂ ಕ್ರಿಯೇಟಿವ್ ಹೆಡ್, ಸಾಧಿಕ್ ಸಾಬ್ ಮಧುಗಿರಿ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರ ಶೀಘ್ರ ದಲ್ಲೇ ತೆರೆ ಕಾಣಲಿದೆ.

key words: Tiger Nag -Adavi -won -three- international awards

Tags :

.