For the best experience, open
https://m.justkannada.in
on your mobile browser.

ಸ್ಟ್ರಾಂಗ್ ರೂಂ ಬಳಿ ಬಿಗಿ ಪೊಲೀಸ್ ಬಂದೋಬಸ್ತ್: ಸಿಸಿ ಟಿವಿ ಕಣ್ಗಾವಲು- ಮೈಸೂರು ಡಿಸಿ  ಕೆ.ವಿ ರಾಜೇಂದ್ರ

12:23 PM Apr 27, 2024 IST | prashanth
ಸ್ಟ್ರಾಂಗ್ ರೂಂ ಬಳಿ ಬಿಗಿ ಪೊಲೀಸ್ ಬಂದೋಬಸ್ತ್  ಸಿಸಿ ಟಿವಿ ಕಣ್ಗಾವಲು  ಮೈಸೂರು ಡಿಸಿ  ಕೆ ವಿ ರಾಜೇಂದ್ರ

ಮೈಸೂರು,ಏಪ್ರಿಲ್, 27,2024 (www.justkannada.in): ನಿನ್ನೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿದ್ದು, ಇಂದು ಮತಯಂತ್ರಗಳು ಸ್ಟ್ರಾಂಗ್ ರೂಂ ಭದ್ರವಾಗಿವೆ. ಈ ಮಧ್ಯೆ ಮೈಸೂರಿನಲ್ಲಿ ಮತಯಂತ್ರಗಳಿಗೆ ಮೂರು ಹಂತದ ಭದ್ರತೆ ವಹಿಸಲಾಗಿದ್ದು ಸ್ಟ್ರಾಂಗ್ ರೂಂ ಸುತ್ತ ಸಿಸಿ ಟಿವಿ ಅಳವಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ  ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.

ಸ್ಟಾಂಗ್ ರೂಮ್ ಬಳಿ ಹದ್ದಿನ ಕಣ್ಣಿಡಲಾಗಿದ್ದು, ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ಮೂರು ಲೇಯರ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ ಕೇಂದ್ರ ಪ್ಯಾರ ಮಿಲಿಟರಿ ಫೋರ್ಸ್, ಎರಡನೇ ಹಂತದಲ್ಲಿ ಸ್ಟೇಟ್ ಆರ್ಮ್ಡ್ ಪೋಲಿಸ್, ಕಟ್ಟಡದ ಸುತ್ತಮುತ್ತ ಸಿವಿಲ್ ಪೋಲಿಸ್ ಭದ್ರತೆ ನೀಡಲಾಗಿದೆ.

150 ಕ್ಕೂ ಹೆಚ್ಚು ಸಿಸಿ ಟಿವಿಗಳ ಬಳಿಕೆ ಮಾಡಲಾಗಿದ್ದು, 28 ಸ್ಟಾಂಗ್ ರೂಮ್ ಗಳಲ್ಲಿ 28 ಸಿಸಿ ಕ್ಯಾಮರಾದ ಕಣ್ಗಾವಲು ಇರಿಸಲಾಗಿದೆ. ಇಂದಿನಿಂದ ಜೂನ್ ನಾಲ್ಕರವರೆಗೂ ಬಿಗಿ ಭದ್ರತೆ ನೀಡಲಾಗಿದೆ.

ಇಂದು ಮಾತನಾಡಿ ಭದ್ರತೆ ಬಗ್ಗೆ ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ, ಇವಿಎಂ, ವಿವಿ ಪ್ಯಾಟ್ ಇರುವ ರೂಂಗಳಿಗೆ ಸೆಂಟ್ರಲ್ ಪ್ಯಾರಾ ಮಿಲಿಟರಿ ಪಡೆಯಿಂದ ಭದ್ರತೆ ವಹಿಸಲಾಗಿದೆ. ಪ್ರತಿ ಶಿಫ್ಟ್ ನಲ್ಲಿ 60  ಸಿಬ್ಬಂದಿಯಿಂದ ಬಂದೋಬಸ್ತ್  ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕ ಸಶಸ್ತ್ರ ಮೀಸಲು ಪಡೆ ಪೊಲೀಸರನ್ನು ಭದ್ರತೆಗೆ ಬಳಸಲಾಗಿದೆ.  ಸ್ಟ್ರಾಂಗ್ ರೂಂ ಸುತ್ತ ಸ್ಥಳೀಯ ಸಿವಿಲ್ ಪೊಲೀಸರು ಗಸ್ತು ತಿರುಗುತ್ತಿದ್ದು,  ಸ್ಟ್ರಾಂಗ್ ರೂಂ ಸುತ್ತ 150 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಎಣಿಕೆ ದಿನದವರೆಗೆ ಸ್ಟ್ರಾಂಗ್ ರೂಂಗೆ ಯಾರಿಗೂ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದೆ. ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಎಫ್.ಐ.ಆರ್ ಅಥವಾ ದೂರು ದಾಖಲಾಗಿಲ್ಲ. 65 ವಿವಿ ಪ್ಯಾಟ್ ಗಳನ್ನ ಬದಲಾವಣೆ ಮಾಡಲಾಗಿದೆ. ಈವರೆಗೂ ಸಿಕ್ಕಿರುವ ಅಂಕಿ ಅಂಶಗಳ ಆಧಾರದ ಮೇಲೆ ಶೇ 71.63 ರಷ್ಟು ಮತದಾನವಾಗಿದೆ ಅಂಚೆ,ಇಡಿಸಿ ಮತಗಳ ಮತ್ತಷ್ಟು ಮಾಹಿತಿ ಬರಬೇಕಿದೆ ಎಂದು ಕೆ.ವಿ ರಾಜೇಂದ್ರ ತಿಳಿಸಿದರು.

Key words:  Tight, police ,security-,strong room, KV Rajendra

Tags :

.