HomeBreaking NewsLatest NewsPoliticsSportsCrimeCinema

ಟೈಮ್ಸ್ ಹೈಯರ್ ಎಜುಕೇಷನ್ ಇಂಪ್ಯಾಕ್ಟ್ ರ್ಯಾಂಕಿಂಗ್‌: ಜೆಎಸ್ ಎಸ್  ಉನ್ನತ ಶಿಕ್ಷಣ, ಸಂಶೋಧನಾ ಅಕ್ಯಾಡೆಮಿಗೆ ಅತ್ಯುನ್ನತ ಸ್ಥಾನ.

06:18 PM Jun 14, 2024 IST | prashanth

ಮೈಸೂರು,ಜೂನ್,14,2024 (www.justkannada.in): ಟೈಮ್ಸ್‌ ಹೈಯರ್‌ ಎಜುಕೇಷನ್‌ ಇಂಪ್ಯಾಕ್ಟ್‌ ರ್ಯಾಂಕಿ೦ಗ್‌-2024ರ ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ ಜಿಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸ೦ಶೋಧನಾ ಅಕ್ಯಾಡೆಮಿಯು ಅತ್ಯುನ್ನತ ಸ್ಥಾನ ಪಡೆದಿದೆ.

ಥೈಲೆ೦ಡ್‌ನ ಬ್ಯಾ೦ಕಾಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಉತ್ತಮ ಆರೋಗ್ಯ ಮತ್ತು ಕ್ಷೇಮ' ವಿಭಾಗದಲ್ಲಿ ಜಿಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸ೦ಶೋಧನಾ ಅಕಾಡೆಮಿಗೆ ಮೊದಲ ರ್ಯಾಂಕ್‌ ಲಭಿಸಿದೆ.

ಪ್ರಶಸ್ತಿಗಾಗಿ 115 ದೇಶಗಳಿ೦ದ 498 ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು. ಭಾರತದಿಂದ 115 ವಿವಿಗಳು ಪಾಲೊಂಡಿದ್ದವು. ಕರ್ನಾಟಕದಿಂದ 12 ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು. ಸುಸ್ಥಿರ ಅಭಿವೃದ್ಧಿ ಗುರಿಗಳು ವಿಷಯದ 9 ವಿಭಾಗಗಳಲ್ಲಿ ಜೆಎಸ್‌ಎಸ್‌ ಸ೦ಸ್ಥೆ ಸ್ಫರ್ಧೆ ಮಾಡಿತ್ತು. 7 ವಿಭಾಗಗಳಲ್ಲಿ ಉತ್ತಮ ಸ್ಮಾನವನ್ನು ಪಡೆದುಕೊಂಡಿದೆ.

ಕೈಗೆಟುಕುವ ಮತ್ತು ಶುದ್ಧ ಶಕ್ತಿ ವಿಭಾಗದಲ್ಲಿ 12ನೇ ಸ್ಥಾನ, ಬಡತನ ನಿರ್ಮೂಲನೆ ವಿಭಾಗದಲ್ಲಿ 21ನೇ ಸ್ಥಾನ, ಭೂಮಿಯ ಮೇಲಿನ ಜೀವನ ವಿಭಾಗದಲ್ಲಿ 49ನೇ ಸ್ಥಾನ, ಶುದ್ಧ ಜಲ ಮತ್ತು ನೈರ್ಮಲ್ಯ ವಿಭಾಗದಲ್ಲಿ 60ನೇ ಸ್ಥಾನ, ಜವಾಬ್ದಾರಿಯುತ ಉತ್ಪಾದನೆ ಮತ್ತು ಬಳಕೆ ವಿಭಾಗದಲ್ಲಿ 78ನೇ ಸ್ಥಾನವನ್ನು ಜೆಎಸ್ ಎಸ್ ಸಂಸ್ಥೆ ಗಳಿಸಿದೆ

ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ  ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿಯ ಕುಲಾಧಿಪತಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು,  ಎಲ್ಲರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸಿ, ಎಲ್ಲಿ ಜ್ಞಾನವು ಭರವಸೆಯ ದಾರಿದೀಪವಾಗಿ ಕಾರ್ಯ ನಿರ್ವಹಿಸುವುದೋ ಅಲ್ಲಿ ಮಾನವೀಯತೆಯು ಸಮೃದ್ಧಿ ಮತ್ತು ಸಾಮರಸ್ಯದ ಕಡೆಗೆ ಮಾರ್ಗದರ್ಶನ ಮಾಡಲು ಸಹಕಾರಿ ಎಂದರು. ಜೊತೆಗೆ ನಾವೀನ್ಯತೆ, ಸಹಾನೂಭೂತಿ ಮತ್ತು ಸುಸ್ಥಿರ ಅಭಿವೃದ್ಧಿಯು ಮುಂಬರುವ ದಿನಗಳಲ್ಲಿ ಸಮಾಜ ಮತ್ತು ಪ್ರಪಂಚಕ್ಕೆ ಅಗತ್ಯವೆನಿಸುವ ಸೇವಾ ಶ್ರೇಷ್ಠತೆಗಾಗಿ ಶ್ರಮಿಸುವಲ್ಲಿ ಮುಂದಿನ ಪೀಳಿಗೆಯನ್ನು ಉತ್ತೇಜಸುವುದು ಎಂದು ಶ್ರೀಗಳು ಹೇಳಿದರು.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಡಾ.  ಬೆಟಸೂರಮಠ ರವರು ಮಾತನಾಡಿ,  ನಮ್ಮ ವಿಶ್ವವಿದ್ಯಾನಿಲಯದ ಅತ್ಯುತ್ತಮ ಸಾಧನೆಯನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ ಎಂದರು. ಮುಂದುವರಿದು, ಅವರು, ಅರೋಗ್ಯಕರ ಶಿಕ್ಷಣ ಮತ್ತು ಸಂಶೋಧನೆಯನ್ನು ವರ್ಧಿಸುವಲ್ಲಿ ನಮ್ಮ ಪ್ರಯತ್ನಗಳು ನಿರಂತರ ಸಮರ್ಪಣ ಮನೋಭಾವ ಹೊಂದುವುದರ ಜೊತೆಗೆ ಯೋಗಕ್ಷೇಮವನ್ನು ಬೆಳೆಸುವ ಮತ್ತು ನವೀನ ಆರೋಗ್ಯ ಪರಿಹಾರಗಳನ್ನು ಉತ್ತೇಜಸುವಲ್ಲಿ ನಮ್ಮ ಬದ್ಧತೆಯು ಅಚಲವಾಗಿರುತ್ತದೆ. ಏಕೆಂದರೆ ನಾವು ಸಮಾಜ ಮತ್ತು ಪರಿಸರದ ಮೇಲೆ ಆಳವಾದ ಪ್ರಭಾವ ಬೀರುವ ಉಪಕ್ರಮಗಳನ್ನು ಮುನ್ನಡೆಸುವುದನ್ನು ಮುಂದುವರಿಸುವುದರ ಜೊತೆಗೆ ನಮ್ಮ ಬದ್ಧತೆಯನ್ನು ಕಾಪಾಡಿಕೊಂಡು ಬರುತ್ತೇವೆ ಎಂದರು.

Key words: Times, Higher, Education, Impact, Ranking, JSS

Tags :
Times- Higher -Education -Impact –Ranking- JSS -Top Rank.
Next Article