ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದ ದಿನದಿಂದಲೇ ವರ್ಗಾವಣೆ ದಂಧೆ- ಕೇಂದ್ರ ಸಚಿವ ಹೆಚ್.ಡಿಕೆ
ಬೆಂಗಳೂರು,ಆಗಸ್ಟ್,21,2024 (www.justkannada.in): ರಾಜ್ಯದಲ್ಲಿ ಜುಲೈನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೊದಲ ದಿನದಿಂಧಲೇ ವರ್ಗಾವಣೆ ದಂಧೆ ಆರಂಭಿಸಿದರು. ಇದರ ಬಗ್ಗೆ ಮಾತನಾಡಿದ್ದಕ್ಕೆ ನನ್ನ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಸ್ವಯಂಕೃತ ಅಪರಾಧಗಳು ಹೆಚ್ಚಳ. ಆಡಳಿತ ಪಕ್ಷದವರೇ ಸ್ವಯಂಕೃತ ಅಪರಾಧ ಮಾಡಿದ್ದಾರೆ. ಈಗ ನನ್ನ ವಿಚಾರವನ್ನ ಎಳೆದು ತಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ವರ್ಗಾವಣೆ ದಂಧೆ ನಡೆಯುತ್ತಿದೆ. ಈ ಬಗ್ಗೆ ನಾನು ದೊಡ್ಡ ಮಟ್ಟದ ವಾಗ್ದಾಳಿ ಮಾಡಿದ್ದೆ. ಇದರಿಂದ ಅವರಿಗೆ ಮುಜುಗರ ಆಗಿತ್ತು. ಹಾಗಾಗಿ ನನ್ನ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ ಎಂದರು.
ಗಣಿ ಇಲಾಖೆಯಲ್ಲಿ ದೊಡ್ಡ ಮಟ್ಟದ ಅಕ್ರಮ ಆಗಿದೆ ಎಂದು ಆರೋಪ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, 2008ರಲ್ಲಿ ಸಿಎಂ ಆದ 2 ತಿಂಗಳಲ್ಲಿ ಆರೋಪ ಮಾಡಿದ್ದರು. ನನ್ನನ್ನ ಸಿಲುಕಿಸಲು ಕಾಂಗ್ರೆಸ್ ನವರು ಯತ್ನಸಿದದ್ದರು. ಆ ವೇಳೆ ವಿಧಾನಸಭೆಯಲ್ಲಿ ಚರ್ಚಿಸಿ ಎಂದಿದ್ದೆ. ಶಾಸಕರ ಬೆಂಬಲವಿಲ್ಲದೇ ಏಕಾಂಗಿಯಾಗಿ ಹೋರಾಡ್ತೇನೆ ಎಂದು ಹೇಳಿದ್ದೆ ಎಂದರು.
Key words: Transfer scam, Congress, power, Union Minister H.D.K