HomeBreaking NewsLatest NewsPoliticsSportsCrimeCinema

ಸರ್ಕಾರಿ ಬಸ್ ನಲ್ಲಿ ಪ್ರಯಾಣ:  ಶಕ್ತಿಯೋಜನೆ ಬಗ್ಗೆ ಮಹಿಳೆಯರ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್

06:06 PM Sep 19, 2024 IST | prashanth

ಮೈಸೂರು,ಸೆಪ್ಟಂಬರ್,19,2024 (www.justkannada.in): ನಮ್ಮ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡುವ ಅನುಕೂಲ ಮಾಡಿಕೊಡಲಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ಸರಕಾರವನ್ನ  ಮಹಿಳೆಯರು ಹಾರೈಸುತ್ತಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಹಾಗೂ ಗ್ಯಾರಂಟಿ ಅನುಷ್ಠಾನ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ತಿಳಿಸಿದರು.

ಇಂದು ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿ ಶಕ್ತಿಯೋಜನೆ ಬಗ್ಗೆ ಮಹಿಳೆಯರ ಅಭಿಪ್ರಾಯ ಪಡೆದು ಮಾತನಾಡಿದ ಪುಷ್ಪ ಅಮರನಾಥ್,  ನಮ್ಮ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದು ಶಕ್ತಿ ಯೋಜನೆ ಬಸ್ ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡುವ  ಅನುಕೂಲ ಮಾಡಿದೆ. ನಾನು ಶಕ್ತಿ ಯೋಜನೆಯನ್ನ ಅಭಿನಂದಿಸುತ್ತೇನೆ. ಸಿದ್ದರಾಮಯ್ಯ ಸರಕಾರ ನುಡಿದಂತೆ ನೆಡೆದಿದ್ದಾರೆ. ಒಂದು ವರ್ಷ ಕಳೆದಿದೆ. ಮಹಿಳೆಯರ. ಬಳಿ ನಾನು ಮಾತನಾಡಿದೆ ಎಲ್ಲಾ ಮಹಿಳೆಯರು ಖುಷಿ ಯಿಂದ ಶಕ್ತಿ ಯೋಜನೆಯನ್ನ ಉಪಯೋಗಿಸುತ್ತಿದ್ದಾರೆ. ಮಹಿಳೆಯರು ತವರು ಮನೆ ಬೇರೆ ಬೇರೆ ಕಡೆ ಪ್ರಯಾಣ ಮಾಡುತ್ತಿದ್ದಾರೆ. ಬಡವರು ಮತ್ತು ಶ್ರೀಮಂತರು ಎಲ್ಲರಿಗೆ ಈ ಯೋಜನೆ ಒಂದು ಶಕ್ತಿ ಯಾಗಿದೆ ಎಂದರು.

ಸಿದ್ದರಾಮಯ್ಯ ಅವರ ಸರಕಾರವನ್ನ ಮಹಿಳೆಯರು ಹಾರೈಸುತ್ತಿದ್ದಾರೆ. ನಾನು ಗ್ಯಾರಂಟಿ ಅನುಷ್ಠಾನ ಉಪಾಧ್ಯಕ್ಷೆಯಾಗಿ ಮೈಸೂರಿನಿಂದ ಮಂಡ್ಯಕ್ಕೆ ಬಸ್ ನಲ್ಲಿ ಪ್ರಯಾಣ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ ಗಳ ವ್ಯವಸ್ಥೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲೋದಿಲ್ಲ ಇದು ಜನರಿಗಾಗಿ ಮಾಡಿರುವುದು ಮುಂದುವರೆಯುತ್ತದೆ ಎಂದರು

ಈ ಸಂದರ್ಭದಲ್ಲಿ ಅಧಿಕಾರಿಗಳಾದ ದಿನೇಶ್ DTO ಕೆಎಸ್ ಆರ್ ಟಿಸಿ ಮತ್ತು ಕಲಾಶ್ರೀ ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ATM ಕೆ ಎಸ್ ಆರ್ ಟಿ ಸಿ ಉಪಸ್ಥಿತರಿದ್ದರು.

Key words: Travel, government bus, Pushpa Amarnath, women, Shakti Yojana

Tags :
government busPushpa AmarnathShakti YojanaTravelwomen
Next Article