HomeBreaking NewsLatest NewsPoliticsSportsCrimeCinema

ಇದನ್ನೇ ತುಘಲಕ್ ದರ್ಬಾರ್ ಎನ್ನುವುದು- ಡಿಕೆ ಶಿವಕುಮಾರ್ ಸ್ಪರ್ಧೆಗೆ ಶಾಸಕ ಸುರೇಶ್ ಕುಮಾರ್ ಕಿಡಿ

01:36 PM Jun 20, 2024 IST | prashanth

ಬೆಂಗಳೂರು, ಜೂನ್.20,2024(www.justkannada.in):  ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹಾಗೂ ಶಾಸಕ ಸುರೇಶ್ ಕುಮಾರ್, ಇದನ್ನೇ ತುಘಲಕ್ ದರ್ಬಾರ್ ಎನ್ನುವುದು ಎಂದು ಕಿಡಿಕಾರಿದ್ದಾರೆ.

ಚನ್ನಪಟ್ಟಣ ನನಗೆ ಜೀವ ಕೊಟ್ಟ ತಾಲೂಕು. ಮತದಾರರು ಹೇಳಿದ್ರೆ ಸ್ಪರ್ಧೇ ಖಚಿತ, ವಿಧಿನೇ ಇಲ್ಲ ಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್  ಅವರು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಶಾಸಕ ಸುರೇಶ್​ ಕುಮಾರ್, ಇತಿಹಾಸದಲ್ಲಿ ಓರ್ವ ವ್ಯಕ್ತಿ ರಾಜಧಾನಿಯನ್ನು ಬದಲಾಯಿಸಿದ್ದ. ರಾಜಧಾನಿಯನ್ನ ದೆಹಲಿಯಿಂದ ದೌಲತಾಬಾದ್​ಗೆ ಬದಲಾಯಿಸಿದ್ದ. ನಂತರ ರಾಜಧಾನಿಯನ್ನ ದೌಲತಾಬಾದ್​​​ನಿಂದ ದೆಹಲಿಗೆ ವಾಸಪ್ ತಂದ. ಇತಿಹಾಸದಲ್ಲಿ ಈ ವಿಲಕ್ಷಣ ವ್ಯಕ್ತಿ ಹೆಸರು ಯಾವಾಗಲೂ ನೆನಪಿರುತ್ತದೆ. ಇದನ್ನೇ ತುಘಲಕ್ ದರ್ಬಾರ್ ಅನ್ನುವುದು.

ಡಿ.ಕೆ.ಶಿವಕುಮಾರ್​​ ಕನಕಪುರದಿಂದ ಆಯ್ಕೆ ಆಗಿ 2028ರವರೆಗೆ ಶಾಸಕರಾಗಿ ಕರ್ತವ್ಯ ನಿರ್ವಹಿಸುವ ಅವಕಾಶವಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿರುವುದು ಅನಗತ್ಯ ಪ್ರಹಸನ. ಇದಕ್ಕೆ ಏನು ಹೇಳಬೇಕು? ಸಾರ್ವಜನಿಕರ ಹಣ, ರಾಷ್ಟ್ರದ ಸಂಪತ್ತು ಹೇಗೆ ವೈಯಕ್ತಿಕ ಪ್ರತಿಷ್ಠೆಗೆ ವೆಚ್ಚವಾಗುತ್ತೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಡಿ.ಕೆ.ಶಿವಕುಮಾರ್​​​​​ ಈ ನಡೆ ವಿವೇಚನೆ ಮತ್ತು ವಿವೇಕದಿಂದ ಕೂಡಿದ ಅತಿರೇಕದ ನಡೆ ಎಂದೆನಿಸದು. ರಾಹುಲ್ ಗಾಂಧಿಯವರು ಇದಕ್ಕೆ ಒಪ್ಪುತ್ತಾರೆಯೇ? ಎಂದು ವಾಗ್ದಾಳಿ ನಡೆಸಿದ್ದಾರೆ.

Key words: Tughlaq Darbar, MLA , Suresh Kumar, DK Shivakumar

Tags :
DK ShivakumarSuresh KumarTughlaq Darbar- MLA
Next Article