ತುಂಗಭದ್ರಾ ಡ್ಯಾಂ ದುರಸ್ತಿಗೆ ಸೂಚನೆ: ನೀರು ಉಳಿಸಲು ಎಲ್ಲಾ ಪ್ರಯತ್ನ- ಡಿಸಿಎಂ ಡಿಕೆ ಶಿವಕುಮಾರ್
11:33 AM Aug 12, 2024 IST
|
prashanth
ಬೆಂಗಳೂರು,ಆಗಸ್ಟ್,12,2024 (www.justkannada.in): ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿ ಹೋದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ತುಂಗಭದ್ರಾ ಡ್ಯಾಂ ದುರಸ್ತಿಗೆ ಸೂಚನೆ ನೀಡಲಾಗಿದೆ. ನೀರು ಉಳಿಸಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದರು.
ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಡ್ಯಾಂ ದುರಸ್ತಿ ಸಂಬಂಧ ಈಗಾಗಲೇ ಗುತ್ತಿಗೆದಾರರ ಬಳಿ ಮಾತನಾಡಿದ್ದೇವೆ, ನಾಲ್ಕೈದು ದಿನದಲ್ಲಿ ರಿಪೇರಿ ಮಾಡಲಾಗುತ್ತದೆ. ರೈತರ ಬೆಳೆಗಳನ್ನ ಉಳಿಸುವ ಕೆಲಸ ಮಾಡುತ್ತೇವೆ ಎಂದರು.
ಡ್ಯಾಂ ಸೇಫ್ಟಿ ಪರಿಶೀಲನೆ ಕಮಿಟಿ ಮಾಡುತ್ತೇವೆ. ಬೇರೆ ಜಲಾಶಯಗಳಲ್ಲಿ ಪರ್ಯಾಯ ವ್ಯವಸ್ಥೆ ಇದೆ ಆದರೆ ತುಂಗಭದ್ರಾಡ್ಯಾಂನಲ್ಲಿ ಒಂದೇ ಚೈನ್ ಇರೋದು. ಅ ಚೈನ್ ಕಟ್ ಆಗಿ ಅವಘಢ ಸಂಭವಿಸಿದೆ. ನೀರು ಉಳಿಸಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದರು.
Key words: Tungabhadra Dam, repair, DCM, DK Shivakumar
Next Article