HomeBreaking NewsLatest NewsPoliticsSportsCrimeCinema

ರಸ್ತೆ ದುರಸ್ತಿ ಬಗ್ಗೆ ಟ್ವೀಟ್: ಜನರ ಸಮಸ್ಯೆ ಪರಿಹಾರ ಆಗಬೇಕು ಅಷ್ಟೆ- ಸಚಿವ ಕೃಷ್ಣ ಬೈರೇಗೌಡ

04:19 PM Aug 16, 2024 IST | prashanth

ಬೆಂಗಳೂರು, ಆಗಸ್ಟ್ 16,2024 (www.justkannada.in):  ಬೆಂಗಳೂರಿನ ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ಡಾಂಬರೀಕರಣಕ್ಕೆ ಮನವಿ ಮಾಡಿ ತಾವೇ  ಟ್ವೀಟ್ ಮಾಡಿರುವ ಬಗ್ಗೆ ಹಲವು ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು  ಕಂದಾಯ ಸಚಿವ ಕೃಷ್ಣಭೈರೇಗೌಡ  ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಟ್ವೀಟ್  ಸಮರ್ಥಿಸಿಕೊಂಡು ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ರಸ್ತೆ ದುರಸ್ತಿ ಕುರಿತು ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಾರ್ವಜನಿಕರ ಪರವಾಗಿ ಅಧಿಕಾರಿಗಳಿಗೆ ಮಾಹಿತಿ ಕೊಡುವ ಪ್ರಯತ್ನ ಮಾಡಿದ್ದೇನೆ. ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ಸಾರ್ವಜನಿಕರ ಪರ ಕೆಲಸ ಮಾಡಬೇಕು. ಜನರ ಸಮಸ್ಯೆ ಪರಿಹಾರ ಆಗಬೇಕು ಅಷ್ಟೆ. ಯಾವ ಮಾರ್ಗದಲ್ಲಿ ಆಗುತ್ತೆ ಎಂಬುದು ಮುಖ್ಯವಲ್ಲ ಎಂದರು.

ಅಧಿಕಾರಿಗಳಿಗೆ ಮಾಹಿತಿ ಕೊಡುವುದಕ್ಕೆ ನಾನಾ ರೀತಿಗಳಿವೆ. ಫೋನ್ ಮಾಡಬಹುದು, ಮೇಸೆಜ್ ಕೊಡಬಹುದು ಹಾಗೂ ಪತ್ರ ಬರೆಯಬಹುದು. ನಾವು ಈಗ ಅವರ ಗಮನಕ್ಕೆ ತಂದಿದ್ದೇನೆ. ಕ್ಷೇತ್ರದ ಸಮಸ್ಯೆ ಕುರಿತು ಅವರ ಗಮನಕ್ಕೆ ತಂದಿದ್ದೇನೆ. ಆದರೆ, ಈ ವಿಚಾರಕ್ಕೆ ಯಾರ್ಯಾರೋ ಏನೇನೋ ಬಣ್ಣ ಕೊಟ್ಟರೆ ಅವರಿಗೆ ಬಿಟ್ಟಿದ್ದು. ಜನರ ಕೆಲಸ ಸರ್ಕಾರದಲ್ಲಿ ಆಗಬೇಕು, ಅದಕ್ಕೆ ಹಾಗೆ ಮಾಡಿದ್ದೇನೆ ಟೀಕಾಕಾರರಿಗೆ ಸಚಿವ ಕೃಷ್ಣಬೈರೇಗೌಡ ಟಾಂಗ್ ಕೊಟ್ಟರು.

Key words: Tweet, road repair, Minister, Krishna Bhairegowda

 

Tags :
Krishna bhairegowdaministerroad repairtweet
Next Article