HomeBreaking NewsLatest NewsPoliticsSportsCrimeCinema

ವಸತಿ ಶಾಲೆಯಲ್ಲಿ ಮಕ್ಕಳು ಅಸ್ವಸ್ಥ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸ್ ತನಿಖೆ ವೇಳೆ ವಿದ್ಯಾರ್ಥಿಯ ಕೃತ್ಯ ಬಯಲು.

11:40 AM Nov 28, 2023 IST | prashanth

ಕೋಲಾರ,ನವೆಂಬರ್28,2023(www.justkannada.in): ಕೋಲಾರದ ದೊಡ್ಡಪೊನ್ನಾಂಡಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳು ಅಸ್ವಸ್ಥ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿಯ ಕೃತ್ಯ ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ಶಾಲೆಗೆ ರಜೆ ನೀಡಲೆಂದು ವಿದ್ಯಾರ್ಥಿ ಕುಡಿಯುವ ನೀರಿಗೆ ಇಲಿ ಪಾಷಾಣ ಬೆರೆಸಿದ್ದ ಅಘಾತಕಾರಿ ವಿಚಾರ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.  ನಿನ್ನೆ ಕೋಲಾರದ ದೊಡ್ಡಪೊನ್ನಾಂಡಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ನೀರು ಕುಡಿದು ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಂದೆತಾಯಿ ನೋಡಬೇಕೆಂಬ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿ ಶಾಲೆಗೆ ರಜೆ ನೀಡಿದರೇ ಹೋಗಿ ತಂದೆ ತಾಯಿಯನ್ನ ನೋಡಬಹುದು ಎಂಬ ಉದ್ದೇಶದಿಂದ ಕುಡಿಯುವ ನೀರಿಗೆ ಇಲಿ ಪಾಷಾಣ ಬೆರೆಸಿದ್ದಾನೆ.  ಈ ಬಗ್ಗೆ ವಿದ್ಯಾರ್ಥಿಯೇ ಪೊಲೀಸರ ಬಳಿ ಬಾಯಿ ಬಿಟ್ಟಿದ್ದು ಸದ್ಯ ಅಪಾಯ ತಪ್ಪಿದೆ.

Key words:  twist - case -children - sick - residential school-kolar

Tags :
twist - case -children - sick - residential school-kolar
Next Article