HomeBreaking NewsLatest NewsPoliticsSportsCrimeCinema

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಆಟೋ ಚಾಲಕರು ಸಾವು

10:28 AM Jun 27, 2024 IST | prashanth

ಮಂಗಳೂರು,ಜೂನ್,27,2024 (www.justkannada.in) : ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಪಾಂಡೇಶ್ವರ ಬಳಿ ನಡೆದಿದೆ.

ಪಾಂಡೇಶ್ವರದ ರೊಸಾರಿಯೋ ಶಾಲೆ ಬಳಿ ಈ ಘಟನೆ ನಡೆದಿದೆ. ರಾಜ ಮತ್ತು ದೇವರಾಜು ಮೃತಪಟ್ಟ ಆಟೋ ಚಾಲಕರು. ಮಳೆ ಆರ್ಭಟದಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ನಡುವೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಆಟೋ ಚಾಲಕ ಒದ್ದಾಡುತ್ತಿದ್ದರು.

ಇವರನ್ನ ರಕ್ಷಿಸಲು ಹೋದ ಮತ್ತೊರ್ವ ಆಟೋ ಚಾಲಕನೂ ಸಹ ಕರೆಂಟ್ ಶಾಕ್ ನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words: Two, auto drivers, died, electric, shock

 

Tags :
Auto DriversdiedelectricshockTwo
Next Article