For the best experience, open
https://m.justkannada.in
on your mobile browser.

ಮೈಸೂರಿನಲ್ಲಿ ಇಬ್ಬರು ಸರಗಳ್ಳರು ಅಂದರ್: ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ.

11:19 AM Jan 02, 2024 IST | prashanth
ಮೈಸೂರಿನಲ್ಲಿ ಇಬ್ಬರು ಸರಗಳ್ಳರು ಅಂದರ್  ಚಿನ್ನಾಭರಣ  ದ್ವಿಚಕ್ರ ವಾಹನ ವಶಕ್ಕೆ

ಮೈಸೂರು,ಜನವರಿ,2,2024(www.justkannada.in): ಮೈಸೂರಿನ ಹೆಬ್ಬಾಳ್  ಠಾಣಾ ಪೋಲಿಸರು ಕಾರ್ಯಾಚರಣೆ ನಡೆಸಿ ಇಬ್ಬರು ಸರಗಳ್ಳರು ಬಂಧಿಸಿ ಚಿನ್ನಾಭರಣ, ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆದಿದ್ದಾರೆ.

ಬಂಧಿತ ಇಬ್ಬರು ಸರಗಳ್ಳರಿಂದ 1.20 ಲಕ್ಷ ಮೌಲ್ಯದ ಚಿನ್ನದ ಸರ, ದ್ವಿಚಕ್ರ ವಾಹನ ವಶವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಬ್ಬಾಳ ರಿಂಗ್ ರಸ್ತೆ ಬಳಿ ಸ್ಕೂಟರ್ ನಲ್ಲಿ ಬಂದು ಸರಗಳ್ಳತನ ಮಾಡಿದ್ದರು. ಈ ಕುರಿತು ಹೆಬ್ಬಾಳ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನ ಪತ್ತೆ ಹಚ್ಚಲು ಹೆಬ್ಬಾಳ್ ಠಾಣಾ ಪೋಲಿಸರು ಬಲೆ ಬೀಸಿದ್ದರು.

ಪೋಲೀಸ್ ಇನ್ಸ್ ಪೆಕ್ಟರ್ ಎಂ ಮಲ್ಲೇಶ್, ಎಸ್.ಐ ಪ್ರವೀಣ್ ಕುಮಾರ್ ಮತ್ತು ಸಿಬ್ಬಂದಿಗಳ ಕಾರ್ಯಾಚರಣೆ ನಡೆಸಿದ್ದು ಈ ವೇಳೆ ಸರಗಳ್ಳರು ಸಿಕ್ಕಿಬಿದ್ದಿದ್ದಾರೆ.  ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಉದಯಗಿರಿ ಬಳಿ ಬಂಧಿಸಲಾಗಿದೆ.

Key words: Two- robbers –arrest- Mysore

 

Tags :

.