HomeBreaking NewsLatest NewsPoliticsSportsCrimeCinema

ಬ್ರಿಟನ್ ಸಂಸತ್ ಚುನಾವಣೆಯಲ್ಲಿ ರಿಷಿ ಸುನೆಕ್ ಗೆ ಭಾರಿ ಮುಖಭಂಗ: ರಾಜೀನಾಮೆ

11:58 AM Jul 05, 2024 IST | prashanth

ಲಂಡನ್,ಜುಲೈ,5,2024 (www.justkannada.in): ಬ್ರಿಟನ್‌ ನ ಸಂಸತ್ ಚುನಾವಣೆಯಲ್ಲಿ ಹಾಲಿ ಪ್ರಧಾನಿ ರಿಷಿ ಸುನಾಕ್‌ ಗೆ ಭಾರಿ ಮುಖಭಂಗವಾಗಿದ್ದು,  ಅವರು ಸೋಲೊಪ್ಪಿಕೊಂಡಿದ್ದಾರೆ.

ಬ್ರಿಟನ್ ಸಂಸತ್ ನ  650 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 370 ಕ್ಷೇತ್ರಗಳಲ್ಲಿ ಲೇಬರ್  ಪಾರ್ಟಿ ಭಾರಿ ಮುನ್ನಡೆ ಸಾಧಿಸಿದೆ. ಕನ್ಸರ್ವೇಟಿವ್ ಪಕ್ಷ  90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಈ ಮೂಲಕ 14 ವರ್ಷದ ಬಳಿಕ ಬ್ರಿಟನ್ ನಲ್ಲಿ ಲೇಬರ್ ಪಕ್ಷ  ಅಧಿಕಾರಕ್ಕೆ ಬರುತ್ತಿದೆ  ಬ್ರಿಟನ್ ಪ್ರಧಾನಿ ಸ್ಥಾನಕ್ಕೆ  ರಿಷಿಸುನೆಕ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ನಡುವೆ ಕೀರ್‌ ಸ್ಟಾರ್ಮರ್‌ ಅವರ ಲೇಬರ್‌ ಪಾರ್ಟಿ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ.

ಈ ಕುರಿತು ಮಾತನಾಡಿರುವ ರಿಷಿ ಸುನೆಕ್,  ಲೇಬರ್‌ ಪಾರ್ಟಿ ಚುನಾವಣೆ ಗೆದ್ದಿದೆ. ನಾನು ಸರ್‌ ಕೀರ್‌ ಸ್ಟಾರ್ಮರ್‌ ಅವರಿಗೆ ಕರೆ ಮಾಡಿ ವಿಜಯಕ್ಕೆ ಶುಭಾಶಯ ಸಲ್ಲಿಸಿದ್ದೇನೆ. ಇಂದು ಅಧಿಕಾರವನ್ನು ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ಹಸ್ತಾಂತರಿಸಲಾಗುವುದು. ಇದು ನಮ್ಮ ದೇಶದ ಸುಭದ್ರತೆ ಮತ್ತು ಭವಿಷ್ಯದ ಬಗ್ಗೆ ನಮ್ಮೆಲ್ಲರಲ್ಲೂ ವಿಶ್ವಾಸ ಮೂಡಿಸಬೇಕಿದೆ ಎಂದು ತಿಳಿಸಿದ್ದಾರೆ.

Key words:  UK, elections, Rishi Sunek , defeat

Tags :
defeatelectionsRishi SunekUK.
Next Article