For the best experience, open
https://m.justkannada.in
on your mobile browser.

ಕೇಂದ್ರ ಬಜೆಟ್: ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ

12:31 PM Jul 23, 2024 IST | prashanth
ಕೇಂದ್ರ ಬಜೆಟ್  ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ ವರೆಗೆ ಸಾಲ ಸೌಲಭ್ಯ

ನವದೆಹಲಿ,ಜುಲೈ,23,2024 (www.justkannada.in): ವಿದ್ಯಾರ್ಥಿಗಳಿಗೆ  ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.

ಇಂದು ಕೇಂದ್ರ ಬಜೆಟ್ ಮಂಡಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್,  ಕೌಶಲ್ಯ ಸಾಲ ಯೋಜನೆ ಪರಿಷ್ಕರಣೆಗೆ ಪ್ರಸ್ತಾಪ , ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂಗಳ ಸಾಲ ಸೌಲಭ್ಯ ನೀಡಲಾಗುವುದು.  ಪ್ರತಿವರ್ಷ 1ಲಕ್ಷ ವಿದ್ಯಾರ್ಥಿಗಳಿಗೆ ನೇರ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದರು.

ಐದು ವರ್ಷಗಳಲ್ಲಿ ಟಾಪ್-500 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶ

ಮುಂದಿನ ಐದು ವರ್ಷಗಳಲ್ಲಿ ಟಾಪ್ 500 ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶವನ್ನು ಸರ್ಕಾರ ನೀಡಲಿದೆ ಈ ಇಂಟರ್ನ್‌ಶಿಪ್ 12 ತಿಂಗಳವರೆಗೆ ಇರುತ್ತದೆ. ಇದರಲ್ಲಿ ಯುವಕರು ವ್ಯಾಪಾರದ ನೈಜ ವಾತಾವರಣವನ್ನು ತಿಳಿದುಕೊಳ್ಳಲು ಮತ್ತು ವಿವಿಧ ವೃತ್ತಿಗಳ ಸವಾಲುಗಳನ್ನು ಎದುರಿಸಲು ಅವಕಾಶವನ್ನು ಪಡೆಯುತ್ತಾರೆ. ಇದರ ಅಡಿಯಲ್ಲಿ ಯುವಕರಿಗೆ ಪ್ರತಿ ತಿಂಗಳು 5,000 ರೂ. ಅಷ್ಟೇ ಅಲ್ಲ ಅವರಿಗೆ ಒಟ್ಟು 6,000 ರೂಪಾಯಿ ಸಹಾಯಧನ ನೀಡಲಾಗುವುದು ಎಂದರು.

ಇನ್ನೂ ಕಂಪೆನಿಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ತರಬೇತಿ ವೆಚ್ಚಗಳನ್ನು ಮತ್ತು ಇಂಟರ್ನ್‌ಶಿಪ್ ವೆಚ್ಚದ ಶೇಕಡಾ 10 ರಷ್ಟು ಭರಿಸಬೇಕಾಗುತ್ತದೆ ಎಂದು  ನಿರ್ಮಲಾ ಸೀತಾರಾಮನ್ ತಿಳಿಸಿದರು.

Key words: Union Budget, Loan facility, Rs 10 lakh, higher education

Tags :

.