HomeBreaking NewsLatest NewsPoliticsSportsCrimeCinema

ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ಕೇಂದ್ರ ಸಚಿವ ಹೆಚ್.ಡಿಕೆ ಕಿಡಿ

06:30 PM Jul 26, 2024 IST | prashanth

ನವದೆಹಲಿ,ಜುಲೈ,26,2024 (www.justkannada.in): ರಾಮನಗರ ಜಿಲ್ಲೆ ಹೆಸರು ಬದಲಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು  ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿರುವ  ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ರಾಮನ ಹೆಸರನ್ನ ತೆಗೆದು ಹಾಕವುದಕ್ಕೆ ಸಾಧ್ಯವಿಲ್ಲ 2028ರೊಳಗೆ ಮತ್ತೆ ರಾಮ ನಗರ ಅಂತಾ ಬರುತ್ತದೆ ಸ್ವಲ್ಪ ದಿನ ಅವರು ಖುಷಿಯಾಗಿರಲಿ ಎಂದರು. ಅವರ ರಾಜಕೀಯ ಪತನ ಆರಂಭವಾಗಿದೆ. ರಾಮನಗರ ಹೆಸರು ಬದಲಾಯಿಸಿದ್ರೆ ಸರ್ಕಾರ ಪತನವಾಗುತ್ತದೆ ಎಂದರು.

ಇವರಿಗೆ ರಾಮನಗರದ ಇತಿಹಾಸ ಗೊತ್ತಿದ್ಯಾ? ಇತಿಹಾಸಗೊತ್ತಿದ್ದರೆ ಅದನ್ನು ತೆಗೆಯುತ್ತಿರಲಿಲ್ಲ. ರಾಮನಗರ ಜಿಲ್ಲೆ ಎಂದು ಹೆಸರು ಇಟ್ಟಾಗ ಏಕೆ ವಿರೋಧಿಸಲಿಲ್ಲ. ವಿಧಾನಸಭೆಯಲ್ಲಿ ಏಕೆ ಮಾತನಾಡಲಿಲ್ಲ. ಜಿಲ್ಲೆಯ ಹೆಸರು ಬದಲಾಯಿಸಲು ಅರ್ಜಿ ಕೊಟ್ಟವರು ಯಾರು? ಜಿಲ್ಲೆಯ ಹೆಸರು ಬದಲಾಯಿಸಿದ್ರೆ ಏನು ಸಿಗುತ್ತದೆ. ರಾಮನಗರ ಈಗಾಗಲೇ ಅಭಿವೃದ್ಧಿ ಆಗಿದೆ. ಜಿಲ್ಲೆಯ ಹೆಸರು ಬದಲಾಯಿಸಿ ಭೂಮಿಯ ಬೆಲೆ ಹೆಚ್ಚಿಸಬೇಕಾ? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿದೆಯಾ? ಏನು ಅಭಿವೃದ್ಧಿ ಮಾಡಿದ್ರೆ ಏನು ಪ್ರಯೋಜನ ಬಂತು ಎಂದು ಹೆಚ್.ಡಿಕೆ ವಾಗ್ದಾಳಿ ನಡೆಸಿದರು.

Key words: Union Minister, HDK, Ramanagara, name change

Tags :
HDKname change.RamanagaraUnion minister
Next Article