HomeBreaking NewsLatest NewsPoliticsSportsCrimeCinema

ಚಾಲೆಂಜಿಂಗ್‌ ಸ್ಟಾರ್‌ ವಿಚಾರಣೆ : LIVE STREAM ಗೆ ಒತ್ತಾಯಿಸಿದ ರೀಯಲ್‌ ಸ್ಟಾರ್..!‌

04:15 PM Jun 17, 2024 IST | mahesh

 

Renuka Swamy murder issue, Director--actor Upendra is of the opinion that there should be a transparent inquiry.

If the case is about a public figure, the police should periodically make public the video recordings of the trial of the case and all the details of the witnesses. The trial of a public person should be done in public with complete transparency.

 

ಬೆಂಗಳೂರು, ಜೂ. 17,2024: (www.justkannada.in news )ದರ್ಶನ್ - ರೇಣುಕಾ ಸ್ವಾಮಿ - ಪಾರದರ್ಶಕ ವಿಚಾರಣೆ ನಡೆಯಲಿ ಎಂದು ನಿರ್ದೇಶಕ ಕಂ ನಟ ಉಪೇಂದ್ರ ಅಭಿಪ್ರಾಯ.

ಈ ಬಗ್ಗೆ ಟ್ವೀಟ್‌ ಮಾಡಿರುವ ಉಪೇಂದ್ರ, ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದರ್ಶನ್ ಬಂಧನ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತು ಅದರ ವಿಚಾರಣೆ ಇಡೀ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಭೆರಗಾಗಿ ನೋಡುತ್ತಿದೆ.

ಈ ಹೈ ಪ್ರೊಫೈಲ್ ಕೇಸ್ ನ ವಿಚಾರಣೆಯಲ್ಲಿ ನಿಶ್ಪಕ್ಷಪಾತವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೇಣುಕಾ ಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ಟೀವಿ ಮಾಧ್ಯಮಗಳಲ್ಲಿ ಮತ್ತು ದರ್ಶನ್ ಅಭಿಮಾನಿಗಳಲ್ಲಿ ಏನೇನೋ ಆತಂಕ, ಅನುಮಾನಗಳು ಕಾಡುತ್ತಿದೆ, ಊಹಾಪೋಹಗಳು ಹುಟ್ಟಿಕೊಳ್ಳುತ್ತಿದೆ.

ಏಕೆಂದರೆ……

ಯಾವುದೇ ಕೇಸ್ ಆದರೂ ಆ ಕೇಸ್ ನ ವಿಚಾರಣೆಯ ವೀಡಿಯೋ ಧಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂದ ಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು. ( ಹಿಂದೆಲ್ಲಾ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದು ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು )( ಕಾನೂನು ಸುಧಾರಣೆಗಳು #CriminalJustice Reforms)

ಅದೇ ರೀತಿ

ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ ಆ ಕೇಸ್ ನ ವಿಚಾರಣೆಯ ವೀಡಿಯೋ ಧಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೋಲೀಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು.  ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು, ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ.

ಆಗ  ರೇಣುಕಾ ಸ್ವಾಮಿ ಕುಟುಂಬಕ್ಕೆ, ಜನರಿಗೆ, ಟೀವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿಲ್ಲದೆೇ ಪೋಲೀಸ್ ಮತ್ತು ಟೀವಿ ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆ.

ನಟ ಉಪೇಂದ್ರರ ಟ್ವೀಟ್‌ ಗೆ ಪರ ಹಾಗೂ ವಿರುದ್ಧದ ಅಭಿಪ್ರಾಯ ವ್ಯಕ್ತವಾಗಿದೆ. ಭೂ ಕಬಳಿಕೆ ಆರೋಪ ನಿಮ್ಮ ಮೇಲೆ ಇದೆಯಲ್ಲ ಅದರಿಂದಲೇ ಲೈವ್‌ ಸ್ಟ್ರೀಮ್‌ ಶುರುವಾಗಲಿ ಎಂದು ಒಬ್ಬರು ಹೇಳಿದರೆ, ಚುನಾವಣೆಗೆ ಸ್ಪರ್ಧಿಸುವುದಾಗಿ ಬರೀ ಪ್ರಚಾರ ಮಾಡಿ, ನಂತರ ಯಾಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ. ಕಮಲ ಪಕ್ಷದ ಜತೆಗಿನ ಒಪ್ಪಂದ ಏನು ಎಂದು ಕಾಲೆಳೆದಿದ್ದಾರೆ.

key words: Challenging Star, Darshan Trial, Real Star, Upendra Demands, Live Stream

SUMMARY: 

Renuka Swamy murder issue, Director--actor Upendra is of the opinion that there should be a transparent inquiry.

If the case is about a public figure, the police should periodically make public the video recordings of the trial of the case and all the details of the witnesses. The trial of a public person should be done in public with complete transparency.

 

Tags :
Challenging starDarshan TrialLive Streamreal starUpendra Demands
Next Article