HomeBreaking NewsLatest NewsPoliticsSportsCrimeCinema

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಕೆ ಆರೋಪ: ಆಂಧ್ರ ಸಿಎಂ ನಾಯ್ಡು ವಿರುದ್ದ ವೈಎಸ್ ಜಗನ್ ವಾಗ್ದಾಳಿ

03:50 PM Sep 20, 2024 IST | prashanth

ಆಂಧ್ರ ಪ್ರದೇಶ,ಸೆಪ್ಟಂಬರ್,20,2024 (www.justkannada.in):   ತಿರುಪತಿ ಲಡ್ಡು ತಯಾರಿಸಲು  ಪ್ರಾಣಿಗಳ ಕೊಬ್ಬು ಕಳಪೆ ಎಣ್ಣೆ ಬಳಸಲಾಗಿದೆ  ಎಂದು ಆಂಧ್ರ ಸರ್ಕಾರ,  ಸಿಎಂ ಚಂದ್ರಬಾಬು ನಾಯ್ಡು ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ವೈಎಸ್ ಜಗನ್,  ಸಿಎಂ ನಾಯ್ಡು ದೇವರನ್ನೂ ರಾಜಕೀಯಕ್ಕೆ ಬಳಸಿಕೊಳ್ಳೂತ್ತಿದ್ದಾರೆ. ತಮ್ಮ ಆಡಳಿತ ವೈಪಲ್ಯ ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ.  ತಿರುಪತಿ ಲಡ್ಡು ವಿಚಾರದಲ್ಲಿ ಸುಳ್ಳು ಹೇಳುತ್ತಿರುವುದು ಧರ್ಮವೇ?  ಎಂದು ಪ್ರಶ್ನಿಸಿದ್ದಾರೆ.

ಸಿಎಂ ನಾಯ್ಡು ಸುಳ್ಳು ಹೇಳಿಕೆಯಿಂದ ಭಕ್ತರ ನಂಬಿಕೆಗೆ ಧಕ್ಕೆಯಾಗಿದೆ.   ತುಪ್ಪ ಪೂರೈಕೆ ಟೆಂಡರ್ ಕರೆಯುವುದು ಹೊಸದೇನಲ್ಲ ಪ್ರತಿ 6 ತಿಂಗಳಿಗೊಮ್ಮೆ ತುಪ್ಪ ಪೂರೈಕೆಗೆ ಟೆಂಡರ್ ಕರೆಯಲಾಗುತ್ತದೆ. ಯಾರಿಗೆ ಎಲ್ 1 ಬರುತ್ತದೇ ಅವರಿಗೆ ಟೆಂಡರ್ ನೀಡಲಾಗುತ್ತದೆ ಎಂದು ಆಂಧ್ರ ಮಾಜಿ ಸಿಎಂ ವೈಎಸ್ ಜಗನ್ ಸ್ಪಷ್ಟನೆ ನೀಡಿದರು.

Key words: use, animal fat, Tirupati Laddu, Andhra CM, Naidu, YS Jagan

Tags :
Andhra CManimal fatNaidutirupati LadduuseYS Jagan
Next Article