HomeBreaking NewsLatest NewsPoliticsSportsCrimeCinema

ಬಿಜೆಪಿ ನಾಯಕರ ವಿರುದ್ದ ವಿ.ಸೊಮಣ್ಣ ಅಸಮಾಧಾನ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಹೀಗಿತ್ತು.

01:32 PM Nov 25, 2023 IST | prashanth

ಹುಬ್ಬಳ್ಳಿ, ನವೆಂಬರ್‌, 25,2023(www.justkannada.in):  ವಿಧಾನಸಭೆ ಚುನಾವಣೆಯಲ್ಲಿ ಸೋಲು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ದ ಮಾಜಿ ಸಚಿವ ವಿ.ಸೋಮಣ್ಣ ಅಸಮಾಧಾನ ಕುರಿತು ಕೇಂದ್ರಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ವಿ. ಸೋಮಣ್ಣ ಅತೃಪ್ತಿ, ಅಸಮಾಧಾನ ಬಗ್ಗೆ ನನಗೆ ಮಾಹಿತಿ ಇಲ್ಲ. ಪಕ್ಷದಲ್ಲಿ ಅತೃಪ್ತಿ ಏನೇ ಇರಲಿ, ಬಹಿರಂಗ ಚರ್ಚೆ ಮಾಡಬಾರದು. ಏನೇ ಇದ್ದರೂ ಬಹಿರಂಗ ಚರ್ಚೆ ಮಾಡುವುದು ಸರಿಯಲ್ಲ ಎಂದರು.

ಹೈಕಮಾಂಡ್ ಗೆ  ವಿ.ಸೋಮಣ್ಣ ದೂರು ನೀಡುತ್ತಿರುವ ಬಗ್ಗೆ ಮಾಹಿತಿ ಇಲ್ಲ. ನಿಮ್ಮ ಕುಂದು ಕೊರತೆಗಳು ಏನೇ ಇರಲಿ ಅದನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ಗಮನಕ್ಕೆ ತರಲಿ. ಆದರೆ ಮಾಧ್ಯಮದ ಮೂಲಕ ಇದನ್ನು ಚರ್ಚಿಸುವುದು ಒಳ್ಳೆಯದಲ್ಲ ಸೋಮಣ್ಣ ಪ್ರಮುಖ ನಾಯಕರು ವೈಯಕ್ತಿಕವಾಗಿಯೂ ಆತ್ಮೀಯರಾಗಿದ್ದಾರೆ. ಹೀಗಾಗಿ  ಅವರ ಜೊತೆ ಮಾತನಾಡುತ್ತೇನೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words:  V. Somanna- displeasure-against -BJP leaders-Union Minister- Prahlad Joshi

 

Tags :
V. Somanna- displeasure-against -BJP leaders-Union Minister- Prahlad Joshi
Next Article