For the best experience, open
https://m.justkannada.in
on your mobile browser.

ತುಮಕೂರಿನಲ್ಲಿ ವಿ.ಸೋಮಣ್ಣ ಭರ್ಜರಿ ಗೆಲುವಿನ ಸಿಕ್ರಿಟ್‌ REVELED...!

01:20 PM Jun 04, 2024 IST | mahesh
ತುಮಕೂರಿನಲ್ಲಿ ವಿ ಸೋಮಣ್ಣ ಭರ್ಜರಿ ಗೆಲುವಿನ ಸಿಕ್ರಿಟ್‌ reveled

ತುಮಕೂರು, ಜೂ.04,2024: (www.justkannada.in  new) ಕಳೆದ ವಿಧನಸಭಾ ಚುನಾವಣೆಯಲ್ಲಿ ಚಾಮರಾಜನಗರ ಹಾಗೂ ವರುಣ ವಿಧಾನಸಭಾಕ್ಷೇತ್ರದಲ್ಲಿ ಪರಾಭವಗೊಂಡಿದ್ದ ಹಿರಿಯ ರಾಜಕಾರಣಿ ವಿ.ಸೋಮಣ್ಣ, ತುಮಕೂರು ಲೋಕಸಭಾಕ್ಷೇತ್ರದಲ್ಲಿ ಕಾಂಗ್ರೇಸ್‍ನ ಮುದ್ದಹನಮೇಗೌಡರ ವಿರುದ್ಧ ಬಾರೀ ಅಂತರದಲ್ಲಿಗೆಲ್ಲುವ ಮೂಲಕ ರಾಜಕೀಯ ಮರುಜನ್ಮ ಪಡೆದಿದ್ದಾರೆ.

ಬಿಜೆಪಿ ಪಕ್ಷದ ಒಳಗೆ ಅಧಿಕಾರ ಕೇಂದ್ರಕ್ಕಾಗಿ ನಡೆಯುತ್ತಿದ್ದಆತಂರಿಕ ಕಲಹ, ಲಿಂಗಾಯತ ಸಮುದಾಯದ ನಾಯಕತ್ವಕ್ಕಾಗಿ ನಡೆಯುತ್ತಿದ್ದ ಹೋರಾಟದ ಸಂಚಿನ ಫಲವಾಗಿ ವಿ.ಸೋಮಣ್ಣ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದರು.

ಗೆಲ್ಲಬಹುದಾಗಿದ್ದ ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟು ಚಾಮರಾಜನಗರ, ವರುಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತುಅಮಿತ್ ಶಾ ಅವರ ಅಣತಿಯಂತೆ ಸ್ಪರ್ಧಿಸಿದ್ದರು.

ರಾಜ್ಯ ನಾಯಕರ ಒಳಸಂಚು ವಿ,ಸೋಮಣ್ಣಅವರ ಸೋಲಿಗೆ ಕಾರಣವಾಗಿತ್ತು. ವಿ.ಸೋಮಣ್ಣಗೆದ್ದರೆ ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆದು ಬಿಡುತ್ತಾರೆ. ತಮ್ಮರಾಜಕೀಯ ಭವಿಷ್ಯಕ್ಕೆಇದು ಮುಳುವಾಗಲಿದೆ ಎಂದು ಭಾವಿಸಿಕೊಂಡು ವಿರೋಧಿ ಬಣ ಅವರನ್ನುರಾಜಕೀಯವಾಗಿ ಮುಗಿಸಿಬಿಡಲು ತಂತ್ರಮಾಡಿತು.

ಆದರೆ ಈ ಬಾರಿ ವಿ.ಸೋಮಣ್ಣ ವಿರೋಧಿ ಬಣಗಳ ಎಲ್ಲ ತಂತ್ರಗಳನ್ನು ಭೇದಿಸಿ ತುಮಕೂರು ಲೋಕಸಭಾಕ್ಷೇತ್ರದಲ್ಲಿಗೆಲ್ಲುವ ಮೂಲಕ ರಾಜಕೀಯವಾಗಿತಾನಿನ್ನು ಪ್ರಬಲವಾಗಿ ಉಳಿದಿದ್ದೇನೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಬಿಜೆಪಿ ಮತ್ತುಜೆಡಿಎಸ್ ಮೈತ್ರಿ ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿದೆ. ಮಾಜಿ ಸಚಿವ ಮಾಧುಸ್ವಾಮಿ ಅವರ ವಿರೋಧದ ನಡುವೆಯೂ ವಿ.ಸೋಮಣ್ಣ ತಮ್ಮ ಚುನಾವಣಾ ತಂತ್ರಗಾರಿಕೆಯನ್ನೆಲ್ಲಾ ಬಳಸಿ ಭಾರೀ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ವಿರೋಧಿ ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ.

ಆರಂಭದಲ್ಲಿ ವಿ.ಸೋಮಣ್ಣಅವರಿಗೆ ತುಮಕೂರು ಲೋಕಸಭಾಕ್ಷೇತ್ರದ ಟಿಕೆಟ್ ನೀಡಲು ಬಿಜೆಪಿಯ ಪ್ರಬಲ ಶಕ್ತಿಗಳು ವಿರೋಧ ವ್ಯಕ್ತಪಡಿಸಿದ್ದವು.ಆದರೆ ಅಮಿತ್ ಶಾ ಅವರು ವಿ.ಸೋಮಣ್ಣಅವರ ಪರವಾಗಿ ನಿಂತು ಟಿಕೆಟ್‍ಕೊಟ್ಟು ಬಿಜೆಪಿಯರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೆ ಸೋಮಣ್ಣಅವರನ್ನು ಗೆಲ್ಲಿಸಿಕೊಂಡು ಬರಲೇ ಬೇಕು ಎಂದು ಸೂಚನೆ ನೀಡಿದರು. ಆಗ ವಿರೋಧಿ ಬಣ ಅನಿವಾರ್ಯವಾಗಿ ತಣ್ಣಗಾಯಿತು.

ಚಾಮರಾಜನಗರ ಹಾಗೂ ವರುಣ ವಿಧಾನ ಸಭಾಕ್ಷೇತ್ರದಲ್ಲಿ ಮಾಡಿದ ತಪ್ಪುಗಳಿಂದ ಕಲಿತ ಪಾಠ ತುಮಕೂರಿನಲ್ಲಿ ವಿ.ಸೋಮಣ್ಣಅವರ ಗೆಲುವಿಗೆ ನೆರವಾಯಿತು. ಆರಂಭದಲ್ಲಿ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿಶ್ವಾಸಗಳಿಸಿಕೊಂಡು ಅಖಾಡಕ್ಕೆ ಇಳಿದ ಸೋಮಣ್ಣ ನಂತರದಲ್ಲಿ ತುಮಕೂರು ಕ್ಷೇತ್ರದ ಎಲ್ಲಾ ಜಾ.ದಳದ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.

ಬಿಜೆಪಿ ಪ್ರಾಬಲ್ಯ ಕಡಿಮೆ ಇದ್ದ ಮಧುಗಿರಿ ಮತ್ತು ಕೊರಟಗೆರೆ ಕ್ಷೇತ್ರಗಳಲ್ಲಿ ತಮ್ಮಅತ್ಯಾಪ್ತರನ್ನುಚುನಾವಣಾ ಉಸ್ತುವಾರಿಗಳಾಗಿ ನೇಮಕ ಮಾಡಿ, ಜಾ,ದಳ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸುವಂತೆ ನೋಡಿಕೊಂಡರು. ಪ್ರತಿಗ್ರಾಮ ಪಂಚಾಯಿತಿ ಕೇಂದ್ರಗಳಿಗೂ ಸಮನ್ವಯ ಸಮಿತಿ ರಚನೆ ಮಾಡಿ ವ್ಯವಸ್ಥಿತವಾಗಿ ಚುನಾವಣೆ ನಡೆಸಿದರು.

ಸ್ವತಃ ತಾವೇ ಪ್ರತಿ ಕ್ಷೇತ್ರದ ಉಸ್ತವಾರಿಯಾಗಿ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಾ ಹೋಗಿದ್ದು ಸೋಮಣ್ಣಅವರ ಗೆಲುವಿಗೆ ಸಹಕಾರಿಯಾಯಿತು.

ಕಾಂಗ್ರೆಸ್‍ನಲ್ಲಿಇಬ್ಬರು ಪ್ರಬಲ ಸಚಿವರು ಇದ್ದರು ಸೋಮಣ್ಣಅವರ ತಂತ್ರಗಾರಿಕೆ ಮುಂದೆ ಅವರ ಆಟ ನಡೆಯಲಿಲ್ಲ.ಮಧುಗಿರಿ ಕ್ಷೇತ್ರದ ಪ್ರಭಾವಿ ನಾಯಕ, ಸಹಕಾರ ಸಚಿವ ರಾಜಣ್ಣ ಮತ್ತುಕೊರಟಗೆರೆ ಕ್ಷೇತ್ರದ ಪ್ರಭಾವಿ ನಾಯಕ, ಗೃಹ ಸಚಿವ ವಿ.ಪರಮೇಶ್ವರ ಅಂತಹ ಘಟಾನುಘಟಿ  ನಾಯಕರಿದ್ದು ತುಮಕೂರಿನಲ್ಲಿ ಕಾಂಗ್ರೇಸ್ ಮುಗ್ಗರಿಸಿದೆ.

ಸಂಸದರಾಗಿದ್ದ ಬಸವರಾಜು,  ಹೋರಾಟ ಮಾಡಿ ವಿ.ಸೋಮಣ್ಣ ಅವರನ್ನು ತುಮಕೂರಿಗೆ ಕರೆದುಕೊಂಡು ಬಂದಿದ್ದರು. ವಿ.ಸೋಮಣ್ಣ ತುಮಕೂರು ಕ್ಷೇತ್ರಕ್ಕೆ ಹೊರಗಿನವರು ಎಂಬ ಅಪ ಪ್ರಚಾರವನ್ನು ನಡೆಸಲಾಯಿತು. ಸ್ವತಃ ಬಿಜೆಪಿಯ ಮಾಜಿ ಸಚಿವ ಮಾಧುಸ್ವಾಮಿ ಅವರೇ ವಿ,ಸೋಮಣ್ಣ ಹೊರಗಿನಿಂದ ಬಂದವರು, ಅವರಿಗೆ ನಮ್ಮ ಬೆಂಬಲ ಇಲ್ಲಎಂದು ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದರು.

ಇದೆಲ್ಲದರ ನಡುವೆ ವಿ.ಸೋಮಣ್ಣ ತುಮಕೂರು ಕ್ಷೇತ್ರದಲ್ಲಿ ಜಯಗಳಿಸಿರುವುದು ರಾಜ್ಯ ರಾಜಕಾರಣದಲ್ಲೂ ಸಂಚಲನ ಮೂಡಿಸಿದೆ.

key words: THE SECRET REVELED, V SOMANNA'S, LANDSLIDE VICTORY, IN TUMKUR

SUMMARY:

Senior politician V. Somanna, who was defeated in Chamarajanagar and Varuna Assembly constituencies in the last Assembly elections, has been reincarnated in politics by winning the Tumkur Lok Sabha seat by a narrow margin against Muddahanamegowda of the Congress.

V. Somanna has proved that he is still politically strong by breaking all the tactics of the rival factions and winning the Tumkur Lok Sabha seat.

Tags :

.