ಸಿಎಂ ಆಗಲು ಸ್ಥಾನ ಖಾಲಿ ಇರಬೇಕಲ್ವಾ? ಈ ಬಗ್ಗೆ ಹೈಕಮಾಂಡ್ ತೀರ್ಮಾನ- ಸಚಿವ ಹೆಚ್.ಕೆ ಪಾಟೀಲ್.
ಕೊಪ್ಪಳ,ನವೆಂಬರ್,4,2023(www.justkannada.in): ಮುಖ್ಯಮಂತ್ರಿ ಬದಲಾವಣೆ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಹೆಚ್.ಕೆ ಪಾಟೀಲ್ , ಸಿಎಂ ಆಗಲು ಸಿಎಂ ಸ್ಥಾನ ಖಾಲಿ ಇರಬೇಕಲ್ವಾ? ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್,ಕೆ ಪಾಟೀಲ್, ನಮ್ಮ ಸರ್ಕಾರದ ಮುಖ್ಯಮಂತ್ರಿ ಸ್ಥಾನದ ಕುರಿತು ನಡೆಯುತ್ತಿರುವ ಚರ್ಚೆ ಮಾಧ್ಯಮಗಳ ಸೃಷ್ಟಿಯಷ್ಟೇ, ಪಕ್ಷದಲ್ಲಿ ಆಂತರಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಈ ವಿಷಯದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಅವಕಾಶ ಸಿಕ್ಕರೇ ಯಾರು ಬೇಕಾದರೂ ಸಿಎಂ ಆಗಬಹುದು. ಸಿಎಂ ಆಗಲು ಸಿಎಂ ಸ್ಥಾನ ಖಾಲಿ ಇರಬೇಕಲ್ವಾ ಹೈಕಮಾಂಡ್ ಮಾಡಿದರೇ ಸಿಎಂ ಆಗಬಹುದು. ಸಿಎಂ ಹುದ್ದೆ ಆಸೆಪಟ್ಟು ತೆಗೆದುಕೊಳ್ಳುವುದಲ್ಲ ಎಂದು ಹೆಚ್.ಕೆ ಪಾಟೀಲ್ ಹೇಳಿದರು.
Key words: vacancy -become – CM-High Command- decision - Minister- HK Patil.