ವಾಲ್ಮೀಕಿ ನಿಗಮ ಅಕ್ರಮ ಪ್ರಕರಣ: ಇಡಿ ದಾಳಿಯಿಂದ ಸರ್ಕಾರಕ್ಕೆ ಮುಜುಗರ ಇಲ್ಲ- ಗೃಹ ಸಚಿವ ಡಾ.ಜಿ. ಪರಮೇಶ್ವರ್
11:09 AM Jul 10, 2024 IST
|
prashanth
ಬೆಂಗಳೂರು,ಜುಲೈ,10,2024 (www.justkannada.in): ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮತ್ತು ಮಾಜಿ ಸಚಿವ ಬಿ.ನಾಗೇಂದ್ರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಪರಮೇಶ್ವರ್, ಪ್ರಕರಣದಲ್ಲಿ ಇಡಿ ಎಂಟ್ರಿಯಿಂದ ಸರ್ಕಾರಕ್ಕೆ ಮುಜುಗರ ಇಲ್ಲ. ಎಸ್ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ಮಧ್ಯೆ ಇಡಿ ಅಧೀಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಇಡಿ ಅಧಿಕಾರಿಗಳು ಸ್ವತಂತ್ರವಾಗಿ ತನಿಖೆ ನಡೆಸುತ್ತಿದ್ದಾರೆ ಎಂದರು.
ಬೆಂಗಳೂರು, ಬಳ್ಳಾರಿ, ರಾಯಚೂರಿನಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಜಿ ಸಚಿವ ನಾಗೇಂದ್ರ. ಬಸನಗೌಡ ದದ್ದಲ್ ನಿವಾಸದ ಮೇಲೆ ಶಾಸಕರ ಭವನದ ಮೇಲೆ ಇಡಿ ದಾಳಿಯಾಗಿದೆ.
Kew words: Valmiki Corporation, illegal, case, ED, Minister, Dr.G. Parameshwar
Next Article