HomeBreaking NewsLatest NewsPoliticsSportsCrimeCinema

ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಸತ್ಯ: ಮುಡಾದಲ್ಲಿ ಯಾವುದೇ ಹಗರಣ ಆಗಿಲ್ಲ- ಸಚಿವ ಎಂ.ಬಿ ಪಾಟೀಲ್

12:10 PM Jul 20, 2024 IST | prashanth

ವಿಜಯಪುರ,ಜುಲೈ, 20,2024 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅವ್ಯವಹಾರ ಆಗಿರುವುದು ಸತ್ಯ. ಆದರೆ ಮುಡಾದಲ್ಲಿ ಯಾವುದೇ ಹಗರಣ ಆಗಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, . ವಾಲ್ಮೀಕಿ  ನಿಗಮ ಹಗರಣದ ಬಗ್ಗೆ ಎಸ್ ಐಟಿ,  ಇಡಿ ತನಿಖೆ ನಡೆಯುತ್ತಿದೆ. ಹಗರಣದಲ್ಲಿ  ಬ್ಯಾಂಕ್ ಅಧಿಕಾರಿಗಳ ತಪ್ಪಿದೆ . ನಾವೇ ಸಾಲ ಕೇಳಿದ್ರೆ ಬೇಗ ಕೊಡಲ್ಲ.  ಹಗರಣದಲ್ಲಿ ಸರ್ಕಾರದ ಪಾತ್ರ ಇಲ್ಲ. ಈ ಪ್ರಕರಣದಲ್ಲಿ  ಕೇಂದ್ರ ವಿತ್ತ ಸಚಿವರು ಕೂಡ ಭಾಗಿಯಾಗಿದ್ದಾರೆ. ಬಿಜೆಪಿ ಅವಧಿಯಲ್ಲೂ ಹಗರಣಗಳು ನಡೆದಿವೆ. ಬಿಜೆಪಿ ಅವಧಿಯಲ್ಲಿನ ಹಗರಣ ತನಿಖೆ ಮಾಡಿಸುತ್ತೇವೆ ಎಂದರು.

ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ವಿರುದ್ದ ನೇರ ಆರೋಪವಿಲ್ಲ ತನಿಖೆ ಆಗ್ತಿದೆ. ನಾಗೇಂದ್ರ ಅವರ ಪಾತ್ರ ಇದೆಯೋ ಇಲ್ಲವೋ ಗೊತ್ತಾಗುತ್ತೆ. ಹಗರಣದಲ್ಲಿ ಎಂಡಿ ಪಾತ್ರ ಇದೆ. ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆಯಾಗಲಿದೆ ಎಂದು ತಿಳಿಸಿದರು.

Key words: Valmiki Corporation, No scam , Muda – Minister, MB Patil

Tags :
MB patilMuda. MinisterNo scamValmiki Corporation
Next Article