For the best experience, open
https://m.justkannada.in
on your mobile browser.

ವಾಲ್ಮೀಕಿ ನಿಗಮ ಹಗರಣ:  ಇಡಿ ತನಿಖೆಯಲ್ಲಿ ವ್ಯವಸ್ಥಿತ ಸಂಚು- ಸಚಿವ ಪ್ರಿಯಾಂಕ್ ಖರ್ಗೆ

02:29 PM Jul 18, 2024 IST | prashanth
ವಾಲ್ಮೀಕಿ ನಿಗಮ ಹಗರಣ   ಇಡಿ ತನಿಖೆಯಲ್ಲಿ ವ್ಯವಸ್ಥಿತ ಸಂಚು  ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜುಲೈ,18,2024 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆಯಲ್ಲಿ ವ್ಯವಸ್ಥಿತ ಸಂಚು ನಡೆದಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ,  ವಾಲ್ಮೀಕಿ ಪ್ರಕರಣದ ಇಡಿ ತನಿಖೆಯಲ್ಲಿ ವ್ಯವಸ್ಥಿತ ಸಂಚು ನಡೆದಿದೆ.  ಸಿಎಂ ಮತ್ತು ಡಿಸಿಎಂ ಹೆಸರು ಹೇಳಿ ಅಂತ ಆರೋಪಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಹಣ ಬಳ್ಳಾರಿ ಚುನಾವಣೆಗೆ ಬಳಕೆಯಾಗಿದೆ ಅಂತ ಹೇಳಲು ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯವರು ಕಳೆದ 10 ವರ್ಷಗಳಲ್ಲಿ ಹಲವು ಸರ್ಕಾರಗಳನ್ನ ಬೀಳಿಸಿದ್ದಾರೆ. 2016ರಲ್ಲಿ ಉತ್ತರಾಖಾಂಡ, 2019ರಲ್ಲಿ ಕರ್ನಾಟಕದಲ್ಲಿಸರ್ಕಾರ ಬೀಳಿಸಿದ್ದಾರೆ . ಗುಜರಾತ್ ​ನಲ್ಲಿ ನಮ್ಮ ಶಾಸಕರನ್ನು ಖರೀದಿ ಮಾಡಿದರು. 2014 ರಿಂದ 440 ಶಾಸಕರನ್ನು ಖರೀದಿ ಮಾಡಲಾಗಿದೆ. ಬಹುಮತ ಇದ್ದರೂ ಕೂಡ ಕೇಂದ್ರದ ಏಜೆನ್ಸಿಗಳನ್ನು ಬಳಸಿಕೊಂಡು ಸರ್ಕಾರಗಳನ್ನು ಬೀಳಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

key words: Valmiki Corporation, scam,  ED, Minister, Priyank Kharge

Tags :

.