HomeBreaking NewsLatest NewsPoliticsSportsCrimeCinema

ವಾಲ್ಮೀಕಿ ನಿಗಮ ಹಗರಣ: ಎಸ್ ಐಟಿ ವರದಿ ಬಂದ ಮೇಲೆ ತಪ್ಪಿತಸ್ಥರ ವಿರುದ್ದ ಕ್ರಮ- ಸಚಿವ ಕೆ.ಜೆ ಜಾರ್ಜ್

12:46 PM Jul 11, 2024 IST | prashanth

ಬಳ್ಳಾರಿ,ಜುಲೈ,11,2024 (www.justkannada.in): ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಗರಣ ಸಂಬಂಧ ಎಸ್ ಐಟಿ ತನಿಖೆ ನಡೆಸುತ್ತಿದೆ. ಎಸ್ ಐಟಿ ವರದಿ ಬಂದ ಮೇಲೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.

ಮಾಜಿ ಸಚಿವ ಬಿ.ನಾಗೇಂದ್ರ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆ ಮೇಲೆ ಇಡಿ ದಾಳಿ ವಿಚಾರ ಕುರಿತು ಮಾತನಾಡಿದ ಸಚಿವ ಕೆ.ಜೆ ಜಾರ್ಜ್, ಎಸ್ ಐಟಿ ತನಿಖೆ ಆರಂಭಿಸಿದೆ ವರದಿ ಬರುವವರೆಗೂ ಕಾಯೋಣ. ವರದಿ ಬಂದ ಮೇಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಎಸ್ ಐಟಿ ತನಿಖೆಗೆ ಶಾಸಕ ನಾಗೇಂದ್ರ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಜಾರ್ಜ್, ನಾಗೇಂದ್ರ ಸಹಕಾರ ನೀಡಿಲ್ಲ ಅಂತಾ ಎಸ್ ಐಟಿ ಹೇಳಿದೆಯಾ..?  ತನಿಖೆಯಲ್ಲಿ  ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಪಕ್ಷಕ್ಕೆ ಮುಜುಗರ ಇಲ್ಲ. ಬಿಜೆಪಿಯವರು ಈಗ ಭ್ರಮೆಯಲ್ಲಿದ್ದಾರೆ. ಎಸ್ ಐಟಿ ಅಧಿಖಾರಿಗಳ ತನಿಖಾ ವರದಿ ಬರುವವರೆಗೆ ಕಾದು ನೋಡೋಣ ಎಂದು ತಿಳಿಸಿದರು.

Key words: Valmiki Corporation, scam, Minister, KJ George

Tags :
KJ GeorgeministerscamValmiki Corporation
Next Article