ಅಗತ್ಯವಿದ್ದರೇ ಬಿ.ನಾಗೇಂದ್ರ ಮತ್ತು ದದ್ದಲ್ ವಿಚಾರಣೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್
12:06 PM Jul 06, 2024 IST
|
prashanth
ಬೆಂಗಳೂರು,ಜುಲೈ,6,2024 (www.justkannada.in): ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದರೇ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರನ್ನ ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಸ್ಐಟಿಯವರು ಪಿಎಗಳನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ. ಬೇಕಿದ್ದರೇ ಬಸನಗೌಡ ದದ್ದಲ್ ಮತ್ತು ನಾಗೇಂದ್ರ ಅವರನ್ನ ವಿಚಾರಣೆ ಮಾಡುತ್ತಾರೆ ಎಂದರು.
ಮುಡಾ ಹಗರಣ ಹೊರತಂದಿದ್ದು ಡಿಸಿಎಂ ಡಿ.ಕೆ ಶಿವಕುಮಾರ್ ಎಂಬ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಜಿ. ಪರಮೇಶ್ವರ್ , ಗೊಂದಲ ಸೃಷ್ಠಿ ಮಾಡಲು ಹೇಳಿಕೆ ಕೊಡ್ತಾರೆ. ಇದು ಸತ್ಯವಲ್ಲ ಎಂದು ಡಿಕೆಶಿ ಅವರೇ ಹೇಳಿದ್ದಾರೆ ಎಂದರು.
Key words: Valmiki, Development, Corporation, Home Minister, Dr. G. Parameshwar
Next Article