HomeBreaking NewsLatest NewsPoliticsSportsCrimeCinema

ನಮ್ಮ ಅಧಿಕಾರಿಗಳು ಬಹಳ ಖದೀಮರಿದ್ದಾರೆ ಎಂದ ಡಿಸಿಎಂ ಡಿಕೆ ಶಿವಕುಮಾರ್

04:49 PM Jul 20, 2024 IST | prashanth

ಬೆಂಗಳೂರು, ಜುಲೈ 20,2024 (www.justkannada.in):  ಅಭಿವೃದ್ಧಿ ನಿಗಮ ಮಂಡಳಿಗಳಲ್ಲಿ‌ ಪಾರದರ್ಶಕತೆ ತರುವ ಬಗ್ಗೆ ನಿಗಮ ಮಂಡಳಿಯ ಅಧ್ಯಕ್ಷರಿಗೆ ನಾವು ಈಗಾಗಲೇ ಹೇಳಿದ್ದೇವೆ. ನಮ್ಮ ಅಧಿಕಾರಿಗಳು ಬಹಳ ಖದೀಮರಿದ್ದಾರೆ. ಅಲ್ಲಿದ್ದ ಖದೀಮರು ಈಗ ಇಲ್ಲಿಗೂ ಬಂದು ಸೇರಿಕೊಂಡಿದ್ದಾರೆ. ಅಲ್ಲಿ 300-400 ಕೋಟಿ‌ ತಿಂದ‌ ಅದೇ ಅಧಿಕಾರಿಗಳು ಇಲ್ಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಖಜಾನೆಯಲ್ಲಿ ನಿಯಂತ್ರಣ ಇಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು. ಹಾಗೆಯೇ ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ‌ ಸಿಎಂ, ಡಿಸಿಎಂ ಹೆಸರು ಹೇಳುವಂತೆ ತನಿಖಾಧಿಕಾರಿಗಳ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರರ,  ನಮ್ಮ ಹೆಸರು ಹೇಳಲಿ ಬಿಡಿ, ಬೇಡ ಎಂದವರು ಯಾರು ಎಂದರು.

ರಾಜ್ಯದಲ್ಲಿ ದೇವರ ಕೃಪೆಯಿಂದ ಉತ್ತಮ ಮಳೆಯಾಗುತ್ತಿದೆ. ತಮಿಳನಾಡಿಗೆ ನೀರು ಬಿಡುವಂತೆ ಕೋರ್ಟ್ ಆದೇಶ ನೀಡಿತ್ತು. ಅದನ್ನ ಪಾಲನೆ ಮಾಡುವ ಸೂಚನೆಗಳು ತಮಗೆಲ್ಲ ಕಾಣುತ್ತಿದೆ.  ಮುಂಜಾಗ್ರತೆಯಾಗಿ ಕೆಲವು ಕಡೆ ನೀರು ಬಿಡಬೇಕಾಗುತ್ತದೆ. ಹೆಚ್ಚು ಕಡಿಮೆ ಆಗಬಾರದು ಅಂತಾ ಪಕ್ಷಿಧಾಮ ಕಡೆ ದೋಣಿ ಎಲ್ಲವನ್ನೂ ನಿಲ್ಲಿಸಿದ್ದೀವಿ. ಎಲ್ಲೆಡೆ ಭಾರಿ ಮಳೆಯಾಗ್ತಿದೆ ಈ ಹಿನ್ನೆಲೆ ನದಿ ಪಕ್ಕದ ಮನೆಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು.

Key words: Valmiki scam, DCM, DK Shivakumar, officers

Tags :
DCMDK ShivakumarofficersValmiki scam
Next Article