For the best experience, open
https://m.justkannada.in
on your mobile browser.

‌ʼ ತಲೈವಾʼ ಗೆ ಮದುವೆ ಆಮಂತ್ರಣ ನೀಡಿದ ವರಲಕ್ಷ್ಮೀ ಶರತ್‌ ಕುಮಾರ್.

07:08 PM Jun 06, 2024 IST | mahesh
‌ʼ ತಲೈವಾʼ ಗೆ ಮದುವೆ ಆಮಂತ್ರಣ ನೀಡಿದ ವರಲಕ್ಷ್ಮೀ ಶರತ್‌ ಕುಮಾರ್

It is known that actress Varalaxmi Sarathkumar got engaged to an art gallerist, Nicholai Sachdev, in Mumbai earlier in March. Now, with the buzz around her marriage, which is reported to happen on July 2, the latest is that the young actress along with her family has invited Superstar Rajinikanth and his family for the wedding.

ಚೆನ್ನೈ, ಜೂ.06,2024: (www.justkannada.in news) ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದು, ವಿವಾಹ ಮಹೋತ್ಸವಕ್ಕೆ ತಲೈವಾ ರಜನಿಕಾಂತ್‌ ಅವರನ್ನು ಕುಟುಂಬ ಸಮೇತ ತೆರಳಿ ಆಹ್ವಾನ ಪತ್ರಿಕೆ ನೀಡಿದರು.

ವರಲಕ್ಷ್ಮೀ ಅವರು ಕಳೆದ ಮಾರ್ಚ್‌ನಲ್ಲಿ ಮುಂಬೈನ ಆರ್ಟ್ ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈಗ, ಜುಲೈ 2 ರಂದು ವಿವಾಹಕ್ಕೆ ದಿನಾಂಕ ನಿಗಧಿಪಡಿಸಲಾಗಿದೆ.

ಯುವ ನಟಿ ತನ್ನ ಕುಟುಂಬದೊಂದಿಗೆ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಅವರ ಕುಟುಂಬವನ್ನು ಮದುವೆಗೆ ಆಹ್ವಾನಿಸಿದ್ದಾರೆ.

ಸದ್ಯ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ರಜನಿಕಾಂತ್ ಜೊತೆಗಿನ ತಮ್ಮ ಮತ್ತು ತಮ್ಮ ಕುಟುಂಬದ ಚಿತ್ರಗಳನ್ನು ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿರುವ  ವರಲಕ್ಷ್ಮಿ, "ನಮ್ಮ ತಲೈವರ್ @ ರಜನಿಕಾಂತ್ ಸರ್ ಅವರನ್ನು ಭೇಟಿ ಮಾಡಲು ಮತ್ತು ಅವರನ್ನು ಮತ್ತು ಲತಾ ಆಂಟಿ ಅವರನ್ನು ಆಹ್ವಾನಿಸಲು ನಾನು ಬಯಸುತ್ತೇನೆ .. ಯಾವಾಗಲೂ ತುಂಬಾ ಬೆಚ್ಚಗಿರುವ ಮತ್ತು ಪ್ರೀತಿಯಿಂದ ಇರುವುದಕ್ಕೆ ಧನ್ಯವಾದಗಳು ಸರ್.. ಧನ್ಯವಾದಗಳು @ ash_rajinikanth ಎಂದಿದ್ದಾರೆ.

ವರದಿಗಳ ಪ್ರಕಾರ, ಮದುವೆಯ ಪೂರ್ವ ಆಚರಣೆಗಳು ಮತ್ತು ಮೆಹೆಂದಿ ಸಮಾರಂಭವು ಚೆನ್ನೈನ ತಾಜ್ ಹೋಟೆಲ್‌ನಲ್ಲಿ ನಡೆಯಲಿದೆ. ಅವರ ವಿವಾಹ ಸಮಾರಂಭವು ಥೈಲ್ಯಾಂಡ್‌ನಲ್ಲಿ ನಡೆಯಲಿದೆ ಮತ್ತು ಸೆಲೆಬ್ರಿಟಿ ದಂಪತಿಗಳ ವಿವಾಹ ಆರತಕ್ಷತೆ ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಕೃಪೆ :  ಟೈಮ್ಸ್ ಆಫ್ ಇಂಡಿಯಾ

key words: Varalaxmi,invites,Rajinikanth,for-her-wedding

SUMMARY: 

It is known that actress Varalaxmi Sarathkumar got engaged to an art gallerist, Nicholai Sachdev, in Mumbai earlier in March. Now, with the buzz around her marriage, which is reported to happen on July 2, the latest is that the young actress along with her family has invited Superstar Rajinikanth and his family for the wedding.

The preparations for the wedding are presently in full swing. Sharing pictures of herself and her family with Rajinikanth, Varalaxmi wrote, "Got to meet our thalaivar @rajinikanth sir and invite him and latha aunty...thank you sir for always being so warm and loving.. thank you @ash_rajinikanth for being so sweet as always.. the apple didn't fall far from the tree..❤️❤️"

Tags :

.