For the best experience, open
https://m.justkannada.in
on your mobile browser.

ಹಿರಿಯ ರಂಗಕರ್ಮಿ ನ.ರತ್ನ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

01:17 PM Jun 19, 2024 IST | prashanth
ಹಿರಿಯ ರಂಗಕರ್ಮಿ ನ ರತ್ನ ನಿಧನ  ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು,ಜೂನ್,19,2024 (www.justkannada.in): ಮೈಸೂರಿನಲ್ಲಿ ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ರಂಗ ತಂಡ ಕಟ್ಟಿ ನಿರಂತರವಾಗಿ  50 ವರ್ಷಗಳವರೆಗೆ ನಡೆಸಿಕೊಂಡು ಬಂದಿದ್ದ ಹಿರಿಯ ರಂಗಕರ್ಮಿ  ನ.ರತ್ನ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

ನ.ರತ್ನ ಅವರಿಗೆ 89 ವರ್ಷ ವಯಸ್ಸಾಗಿತ್ತು.  ಅವರಿಗೆ ಪುತ್ರ ಅಜಿತ್,‌ ಪುತ್ರಿ ಕವಿತಾರತ್ನ ಇದ್ದಾರೆ. ನ.ರತ್ನ  ಅವರು ರಚಿಸಿದ 'ಶಾಂತಿ ಕುಟೀರ' ನಾಟಕ ಈಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತ್ತು. ನ.ರತ್ನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿದ್ದರು. ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಇಂದು ನಡೆಯಲಿದೆ.

ನ.ರತ್ನ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಹಿರಿಯ ರಂಗಕರ್ಮಿ ಮತ್ತು ವಾಕ್‌ಶ್ರವಣ ಶಿಕ್ಷಣ ತಜ್ಞ ಡಾ.ನ.ರತ್ನ ಅವರ ಅಗಲಿಕೆ ಎಂದೆಂದೂ ತುಂಬಲಾರದ ನಷ್ಟ.

ಅಧ್ಯಾಪನ ಮತ್ತು ರಂಗಚಟುವಟಿಕೆಗಳ ಜೊತೆಗೆ ಮೈಸೂರಿನ ಪ್ರಖ್ಯಾತ ವಾಕ್ ಶ್ರವಣ ಚಿಕಿತ್ಸಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ.ನ.ರತ್ನ ಅವರು ದೈಹಿಕ ನ್ಯೂನತೆ ಹೊಂದಿರುವ ಸಾವಿರಾರು ಜನರ ಪಾಲಿನ ಜೀವದಾತರಾಗಿದ್ದರು.

ಈ ಪುಣ್ಯಪುರುಷನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

Key words: Veteran, actor,  N. Ratna, passes away, CM Siddaramaiah-condoles

Tags :

.