HomeBreaking NewsLatest NewsPoliticsSportsCrimeCinema

BREAKING NEWS : ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರನ್ನೇ ಇದೀಗ ಪ್ರಕರಣದ ಸಾಕ್ಷಿ

12:56 PM Jun 20, 2024 IST | mahesh

 

Vijayalakshmi was asked about how Darshan’s footwear reached her residence and if anyone had used it in any capacity. The report mentioned that Vijayalakshmi gave her statement and is now likely to be treated as a witness in the case.

 

ಬೆಂಗಳೂರು, ಜೂ.20,2024: (www.justkannada.in news) ಚಿತ್ರ ನಟಿಗೆ ಅಶ್ಲೀಲ ಸಂದೇಶ ಕಳುಹಿಸಿ ಕೆಂಗಣ್ಣಿಗೆ ಗುರಿಯಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರನ್ನೇ ಇದೀಗ ಪ್ರಕರಣದ ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆ ಇದೆ.

ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಹೊಸ ಬೆಳವಣಿಗೆ. ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರ ಫ್ಲಾಟ್‌ನಿಂದ ನಟನ ಪಾದರಕ್ಷೆಗಳು ಪತ್ತೆಯಾಗಿದ್ದು ಘಟನೆಗೆ ತಿರುವು ನೀಡಿದೆ.

ಪಾದರಕ್ಷೆಗಳು ವಿಜಯಲಕ್ಷ್ಮೀ ಅವರ ನಿವಾಸಕ್ಕೆ ಹೇಗೆ ತಲುಪಿದವು ಮತ್ತು ಬೇರೆ ಯಾರಾದರೂ ಅದನ್ನು ಬಳಸಿದ್ದಾರೆಯೇ ಎಂದು ವಿಚಾರಣೆ ವೇಳೆ ವಿಜಯಲಕ್ಷ್ಮೀ ಅವರನ್ನು  ಕೇಳಲಾಯಿತು. ಈ ಬಗ್ಗೆ ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದು, ಇದೀಗ ಪ್ರಕರಣದ ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದೇ ಭಾವಿಸಲಾಗಿದೆ.

ದರ್ಶನ್ ವಸ್ತ್ರ ಸಹಾಯಕ ಅತ್ತಿಗುಪ್ಪೆಯ ರಾಜು ಎಂಬುವರು ಘಟನೆಯ ನಂತರ ದರ್ಶನ್ ಅವರ ಬಟ್ಟೆ ಮತ್ತು ಪಾದರಕ್ಷೆಗಳನ್ನು ವಿಜಯಲಕ್ಷ್ಮಿಗೆ ನೀಡಿದ್ದರು ಎಂದು ಪೊಲೀಸರ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪತ್ನಿ ಜತೆಗೆ ಪೂಜೆ :

ಘಟನೆ ನಡೆದ ಮರುದಿನದ ಮುಂಜಾನೆ ನಟ ದರ್ಶನ್‌  ಅವರು ನಿವಾಸದಲ್ಲಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಪೋಲೀಸರ ಪ್ರಕಾರ, ಜೂನ್ 9 ರಂದು ರೇಣುಕಾ ಸ್ವಾಮಿಯ ದೇಹ ವಿಲೇವಾರಿ ಮಾಡಿದ ನಂತರ ನಟ ದರ್ಶನ್‌ ಪತ್ನಿಯ ನಿವಾಸಕ್ಕೆ ಭೇಟಿ ನೀಡಿದ್ದರು.

ಜೂನ್ 9 ರ ಮುಂಜಾನೆ ದರ್ಶನ್ ಹೊಸ್ಕೆರೆಹಳ್ಳಿಯಲ್ಲಿರುವ ಪತ್ನಿಯ ನಿವಾಸಕ್ಕೆ ತೆರಳಿದ್ದರು. ನಂತರ ಮೈಸೂರಿಗೆ ತೆರಳುವ ಮುನ್ನ ಫ್ಲಾಟ್‌ನಲ್ಲಿ ಪತ್ನಿಯೊಂದಿಗೆ ಪೂಜೆ ಸಲ್ಲಿಸಿದ್ದರು.

ಜೂನ್ 11 ರಂದು ನಟ ದರ್ಶನ್‌ ರನ್ನು ಮೈಸೂರಿನಲ್ಲಿ ಬಂಧಿಸಲಾಯಿತು.

key words:  Vijayalakshmi Darshan, gave her statement, and is now likely to be treated as , witness in the case.

SUMMARY: 

Vijayalakshmi was asked about how Darshan’s footwear reached her residence and if anyone had used it in any capacity. The report mentioned that Vijayalakshmi gave her statement and is now likely to be treated as a witness in the case.

A new development in the trial of the murder case. The actor's footwear was found from darshan's wife Vijayalakshmi's flat.

During the interrogation, Vijayalakshmi was asked how the footwear reached Vijayalakshmi's residence and whether anyone else had used it. Vijayalakshmi has given a statement in this regard and it is believed that she is now likely to be considered as a witness in the case.

 

Tags :
and is now likely to be treated asgave her statementVijayalakshmi Darshanwitness in the case.
Next Article