For the best experience, open
https://m.justkannada.in
on your mobile browser.

ಸಿಎಂ ವಿರುದ್ಧ ನಿರಾಧಾರ ಆರೋಪ : ವಿಜಯೇಂದ್ರ, ನಿಖಿಲ್ SHOW FLOP.!

03:37 PM Aug 12, 2024 IST | mahesh
ಸಿಎಂ ವಿರುದ್ಧ ನಿರಾಧಾರ ಆರೋಪ   ವಿಜಯೇಂದ್ರ  ನಿಖಿಲ್ show flop

What they did was not a march, but a journey of sin. Kumaraswamy, Vijayendra and Nikhil took out a padayatra. But his show flopped. Instead of Mysore Chalo, they should do Delhi Chalo. Delhi should Chalo to bring funds from the Centre to the state. KPCC women's wing president Pushpa Amarnath in Mysuru.

ಮೈಸೂರು, ಆ.12,2024: (www.justkannada.in news) ಮುಡಾ ಹಗರಣ ಮುಂದಿಟ್ಟುಕೊಂಡು ಮೈಸೂರು ಚಲೋ ಪಾದಯಾತ್ರೆ ನಡೆಸಿದ ವಿಪಕ್ಷಗಳ ವಿರುದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ವಾಗ್ದಾಳಿ.

ಅವರು ನಡೆಸಿದ್ದು ಪಾದಯಾತ್ರೆಯಲ್ಲ, ಬದಲಿಗೆ ಅದು ಪಾಪದ ಯಾತ್ರೆ. ಪಾದಯಾತ್ರೆ ಮೂಲಕ ಕುಮಾರಸ್ವಾಮಿ, ವಿಜಯೇಂದ್ರ, ನಿಖಿಲ್ ಶೋ ಮಾಡಿದರು. ಆದರೆ ಅವರ ಶೋ ಪ್ಲಾಫ್ ಆಯಿತು. ಇವರು ಮೈಸೂರು ಚಲೋ ಮಾಡುವ ಬದಲು ದೆಹಲಿ ಚಲೋ ಮಾಡಬೇಕು. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರಲು ದೆಹಲಿ ಚಲೋ ಮಾಡಬೇಕು. ಮೈಸೂರಿನಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿಕೆ.

ಧರ್ಮಪತ್ನಿ ಖರೀದಿಸಿದ್ದು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಪಕ್ಷಗಳು ಮಾಡುತ್ತಿರುವ ಆರೋಪ ಆಧಾರ ರಹಿತವಾದದ್ದು. ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತ್ತಮ್ಮ ಅವರು ಜಮೀನು ಖರೀದಿಸಿ ಬಳಿಕ ನಿವೇಶನ ಪಡೆದುಕೊಂಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನು..? ಎಂದು ಪ್ರಶ್ನಿಸಿದ ಡಾ.ಪುಷ್ಪಾ ಅಮರನಾಥ್.‌

ಜನತೆ ಆಶೀರ್ವಾದ:

ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ 135ಸ್ಥಾನ ನೀಡಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯನವರು ಉತ್ತಮವಾಗಿ ಆಡಳಿತ ಮಾಡುತ್ತಿದ್ದಾರೆ.  ಇಂಥ ಸ್ಥಿತಿಯಲ್ಲಿ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತಿವೆ. ಜತೆಗೆ ರಾಜ್ಯಪಾಲರ ಮೂಲಕ ಸರ್ಕಾರ ಅಸ್ಥಿರಗೊಳಿಸಲಿಕ್ಕೆ ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಈ ಸರ್ಕಾರ ಅಸ್ಥಿರಗೊಳಿಸಲಿಕ್ಕೆ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಡಾ,ಪುಷ್ಪಾ ಅಮರನಾಥ್.

ಅಹಿಂದ ಸಮುದಾಯದ ನಾಯಕರಾದ ಸಿದ್ದರಾಮಯ್ಯ ಅವರು ಎರಡನೇ ಭಾರಿ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಆಡಳಿತ ನಡೆಸುತ್ತಿರುವುದನ್ನು ಬಿಜೆಪಿ, ಜೆಡಿಎಸ್ ನವರು ಸಹಿಸುತ್ತಿಲ್ಲ. ಆದ್ದರಿಂದಲೇ ಸಿಎಂ ವಿರುದ್ಧ ಇಲ್ಲಸಲಲದ ಕಿತಾಪತಿ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನರೆ ಈ ಬಿಜೆಪಿ, ಜೆಡಿಎಸ್ ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ರಕ್ತದಾನ :

ಸಿಎಂ ಸಿದ್ದರಾಮಯ್ಯ 77ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆ, ಮೈಸೂರಿನಲ್ಲಿ ರಕ್ತದಾನ ಶಿಬಿರ ಆಯೋಜನೆ. ಕೆಪಿಸಿಸಿ ಮಹಿಳಾ ಘಟಕದಿಂದ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ರಕ್ತದಾನ ಶಿಬಿರ ಆಯೋಜನೆ. ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್.

Key words: Vijayendra, Nikhil, SHOW FLOP, due to, baseless, allegations, against, CM

SUMMARY: 

What they did was not a march, but a journey of sin. Kumaraswamy, Vijayendra and Nikhil took out a padayatra. But his show flopped. Instead of Mysore Chalo, they should do Delhi Chalo. Delhi should chalo to bring funds from the Centre to the state. KPCC women's wing president Pushpa Amarnath in Mysuru.

Tags :

.