For the best experience, open
https://m.justkannada.in
on your mobile browser.

ರೈತರಿಗೆ ಆರೋಗ್ಯ, ಪಿಂಚಣಿ ಇತರೆ ಸೌಲಭ್ಯ ದೊರಕಿಸಲು ದೂರದೃಷ್ಠಿ ಯೋಜನೆ ರೂಪಿಸಿ- ಬಡಗಪುರ ನಾಗೇಂದ್ರ ಆಗ್ರಹ.

12:34 PM Dec 19, 2023 IST | prashanth
ರೈತರಿಗೆ ಆರೋಗ್ಯ  ಪಿಂಚಣಿ ಇತರೆ ಸೌಲಭ್ಯ ದೊರಕಿಸಲು ದೂರದೃಷ್ಠಿ ಯೋಜನೆ ರೂಪಿಸಿ  ಬಡಗಪುರ ನಾಗೇಂದ್ರ ಆಗ್ರಹ

ಮೈಸೂರು,ಡಿಸೆಂಬರ್,19,2023(www.justkannada.in): ರೈತರಿಗೆ ಆರ್ಥಿಕ ಸ್ಥಿರತೆ, ರೈತಕುಟುಂಬದ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ,  60 ವರ್ಷ ನಂತರ ಪಿಂಚಣಿ ಇತರ ವ್ಯವಸ್ಥೆ ದೊರಕಿಸಲು ದೂರದೃಷ್ಟಿ ಯೋಜನೆಯನ್ನು ರೂಪಿಸಬೇಕು. ಕಬ್ಬು ಬೆಳೆಗಾರರಿಗೆ ಹಿಂದಿನ ಸರ್ಕಾರ ಘೋಷಣೆ ಮಾಡಿರುವ 150ರೂ.  ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಡಗಲಪುರ ನಾಗೇಂದ್ರ, ಹಿಂದೆ ಇದ್ದ ಸರ್ಕಾರ ಕಬ್ಬಿನ ಉಪ ಉತ್ಪನ್ನ ಆಧಾರದ ಮೇಲೆ ಟನ್ ಕಟ್ಟಿಗೆ 150 ರೂ. ಪಾವತಿಸಲು ತಿರ್ಮಾನಿಸಿತು. ಈ ಆದೇಶದ ವಿರುದ್ಧ ಸಕ್ಕರೆ ಕಾರ್ಖಾನೆಗಳು ತಡೆಯಾಜ್ಞೆ ತಂದಿವೆ. ಹಿಂದಿನ ಸರ್ಕಾರ ಮಾಡಿದ ಆದೇಶದಲ್ಲಿ ಕೆಲವು ತಾಂತ್ರಿಕ ತೊಂದರೆಗಳಿದ್ದು ಅದನ್ನು ಬಗೆಹರಿಸಿ ಕಬ್ಬು ಬೆಳೆಗಾರರಿಗೆ ಟನ್ ಕಬ್ಬಿಗೆ 150 ರೂ. ಪಾವತಿಸಲು ಸಂಘ ಒತ್ತಾಯಿಸುತ್ತದೆ. ಕಳೆದ ತಿಂಗಳು ನಡೆದ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ಈ ಸಂಬಂಧ ಸುದೀರ್ಘವಾಗಿ. ಚರ್ಚಿಸಲಾಗಿದ್ದು ಕೂಡಲೇ ಮತ್ತೊಂದು ಸಭೆಯನ್ನು ಕರೆದು ಇರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಸಂಘ ಒತ್ತಾಯಿಸಿತ್ತದೆ ಎಂದರು.

ಡಿ. 21 ರಂದು ರೈತನಾಯಕ ಎನ್.ಡಿ.ಸುಂದರೇಶ್  ಅವರ ದಿನಾಚರಣೆ

ಕರ್ನಾಟಕ ರಾಜ್ಯ ರೈತಸಂಘದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಧೀಮಂತ ಹೋರಾಟಗಾರ ದಿ. ಎನ್.ಡಿ.ಸುಂದರೇಶ್ ಅವರ 31ನೇ ನೆನಪಿನ ದಿನಾಚರಣೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ದಿನಾಂಕ 21.12.2023 ಗುರುವಾರದಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಚರಿಸಲಿದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಡಿ. 23 ರಂದು ಕೆ.ಎಸ್.ಪುಟ್ಟಣ್ಣಯ್ಯ ಅವರ 75ನೇ ಜನ್ಮದಿನಾಚರಣೆ.

ರೈತ ಕಣ್ಮಣಿ ಕೆ.ಎಸ್.ಪುಟ್ಟಣ್ಣಯ್ಯ  ಅವರ 75ನೇ ವರ್ಷದ ದಿನಾಚಣೆಯನ್ನು ದಿನಾಂಕ 23.12.2023 ರಂದು ರಾಯಚೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು ರೈತಪರ ಪ್ರಧಾನಿಯಾಗಿದ್ದ ದಿ. ಚೌದ‌ರ್ ಚರಣ್ ಸಿಂಗ್  ಅವರ ಜನ್ಮದಿನವು ಸಹ ಆಗಿದ್ದು ರೈತದಿನಾಚರಣೆಯು ಸಹ ಆಗಿದೆ. ಈ ದಿನಾಚರಣೆಯನ್ನು ರಾಜ್ಯ ಮಟ್ಟದ ಕಾರ್ಯಕ್ರಮವಾಗಿ ಕರ್ನಾಟಕ ರಾಜ್ಯ ರೈತಸಂಘ ರಾಯಚೂರಿನಲ್ಲಿ ಆಯೋಜಿಸಿದೆ.  ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ  ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ವಿಶೇಷ ಅಹ್ವಾನಿತರಾಗಿ ಸಚಿವ ಬೋಸರಾಜ್, ಶಾಸಕರಾದ ಬಿ.ಆರ್.ಪಾಟೀಲ್ ಆಗಮಿಸಲ್ಲಿದ್ದಾರೆ. ರೈತ ಶಾಸಕ ದರ್ಶನ್ ಪುಟ್ಟಣ್ಣಯ್ಯ  ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.  ದಲಿತ ಸಮಿತಿಯ ಮುಖಂಡರು ಮುಖ್ಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಈ ಕಾರ್ಯಕ್ರಮ ಮುಗಿದ ನಂತರ ರಾಜ್ಯ ಕಾರ್ಯಕರಣಿ ನಡೆಯಲಿದ್ದು ಮುಂದಿನ ಹೋರಾಟಗಳ ಬಗ್ಗೆ ಅಲ್ಲಿ ತೀರ್ಮಾನಿಸಲಾಗುವುದು ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಸಂಘದ ಪ್ರದಾನ ಕಾರ್ಯದರ್ಶಿ ಡಿ. ನುಲೇನೂರು ಎಂ.ಶಂಕರಪ್ಪ ಮಾತನಾಡಿ, ರಾಜ್ಯದ ಕೃಷಿಬೆಲೆ ಆಯೋಗದ ಅಧ್ಯಕ್ಷರನ್ನಾಗಿ ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವವರನ್ನು ನೇಮಕ ಮಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮುಖ್ಯಮಂತ್ರಿಯವರನ್ನು ವಿನಂತಿ ಮಾಡುತ್ತದೆ ಎಂದರು.

ಸಂಘದ ಕಾರ್ಯದರ್ಶಿ (ಕೇಂದ್ರ ಸ್ಥಾನ) ಪಿ. ಗೋಪಾಲ್ ಮಾತನಾಡಿ, ರಾಜ್ಯ ಸರ್ಕಾರದ ಸಮೀಕ್ಷೆಯಂತೆಯೇ ರಾಜ್ಯದ 90 ಭಾಗ ಪ್ರದೇಶ ಬರಗಾಲ ಪೀಡಿತ ಪ್ರದೇಶವಾಗಿದೆ. ರೈತರು ಬೆಳೆಹಾನಿಯಿಂದ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೆಳೆಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

Key words: visionary plan – provide- health-pension - farmers- Badagpur Nagendra

Tags :

.