For the best experience, open
https://m.justkannada.in
on your mobile browser.

ಇಂಡಿಗನತ್ತ ಗ್ರಾಮಕ್ಕೆ ಭೇಟಿ: ಬಂಧಿತರ ಬಿಡುಗಡೆಗೊಳಿಸುವ ಭರವಸೆ ನೀಡಿದ ಡಿಸಿ ಶಿಲ್ಪನಾಗ್

12:46 PM May 14, 2024 IST | prashanth
ಇಂಡಿಗನತ್ತ ಗ್ರಾಮಕ್ಕೆ ಭೇಟಿ  ಬಂಧಿತರ ಬಿಡುಗಡೆಗೊಳಿಸುವ ಭರವಸೆ ನೀಡಿದ ಡಿಸಿ ಶಿಲ್ಪನಾಗ್

ಹನೂರು,ಮೇ,14,2024 (www.justkannada.in): ಲೋಕಸಭೆ ಚುನಾವಣೆ ವೇಳೆ ಮತಯಂತ್ರವನ್ನ ಧ್ವಂಸಗೊಳಿಸಿದ್ದ ಪ್ರಕರಣ ಸಂಬಂಧ ಇಂದು ಇಂಡಿಗನತ್ತ ಗ್ರಾಮಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂಧಿಸಿದರು.

ರಾಜ್ಯದಲ್ಲಿ ಏಪ್ರಿಲ್ 26 ರಂದು ನಡೆದ ಲೋಕಸಭಾ ಚುನಾವಣೆ ಮತದಾನದ ವೇಳೆ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ  ಇಂಡಿಗನತ್ತ ಗ್ರಾಮಸ್ಥರು ಮತದಾನಕ್ಕೆ ಬಹಿಷ್ಕಾರ ಹಾಕಿ ಗಲಾಟೆ ಮಾಡಿ ಮತಯಂತ್ರ ಧ್ವಂಸಗೊಳಿಸಿದ್ದರು. ಪ್ರಕರಣ ಸಂಬಂಧ ಹಲವರನ್ನ ಬಂಧಿಸಲಾಗಿದೆ.

ಮತಯಂತ್ರ ಧ್ವಂಸ ಪ್ರಕರಣದಲ್ಲಿ 40 ಕ್ಕೂ ಹೆಚ್ಚು ಜನರು ಜೈಲು ಸೇರಿದ್ದು, ಪೋಲಿಸರ ಬಂಧನ ಭೀತಿಯಿಂದ 200 ಹೆಚ್ಚು ಗ್ರಾಮಸ್ಥರು ಊರು ಬಿಟ್ಟಿದ್ದಾರೆ. ಇನ್ನು ವಯಸ್ಸಾದ ವೃದ್ಧರು, ಮಕ್ಕಳು, ಮಹಿಳೆಯರಿಗೆ ಆಶ್ರವಾಗಿದ್ದ ಮನೆಯ ಯಜಮಾನರಿಲ್ಲ ಹಿರಿಜೀವಗಳು ಪರದಾಟ ನಡೆಸುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಹಿರಿಜೀವಗಳಿಗೆ ಚಿಕಿತ್ಸೆ ಇಲ್ಲದೆ ಪರದಾಡುವ ಸುದ್ದಿಯಾಗಿತ್ತು.

ಇದೀಗ ಜಿಲ್ಲಾಡಳಿತ ಸ್ಥಳಕ್ಕೆ ದೌಡಾಯಿಸಿದ್ದು ಇಂಡಿಗನತ್ತ ಗ್ರಾಮಕ್ಕೆ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಸೇರಿದಂತೆ ಎಲ್ಲಾ ಅಧಿಕಾರಿಗಳು ಭೇಟಿ ನೀಡಿದ್ದು ಗ್ರಾಮಸ್ಥರು ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಶಿಲ್ಪನಾಗ್, ಯಾರು ಮನೆ ಬಿಟ್ಟು ಹೋಗಬೇಡಿ, ಮತಯಂತ್ರ ಪ್ರಕರಣಗಳಲ್ಲಿ ಬಂಧಿಸಿರುವವರನ್ನ ಬಿಡುಗಡೆ ಮಾಡುತ್ತೇವೆ. ಯಾರು ಊರು ಬಿಟ್ಟು ಹೋಗಬೇಡಿ, ಯಾರನ್ನೂ ಬಂಧಿಸುವುದಿಲ್ಲ, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ. ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

Key words: Visit –Indiganatta-village- DC Shilpanag

Tags :

.