ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ನನಗೆ ಯಾವುದೇ ನಾಯಕತ್ವ ಬೇಡ- ಡಿಸಿಎಂ ಡಿ.ಕೆ ಶಿವಕುಮಾರ್.
ಬೆಂಗಳೂರು,ಮೇ,4,2024 (www.justkannada.in): ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಒಕ್ಕಲಿಗ ನಾಯಕರಾಗಲು ಯತ್ನಿಸುತ್ತಿದ್ದಾರೆ. ಆದರೆ ಇದು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನನಗೆ ಯಾವ ನಾಯಕತ್ವವೂ ಬೇಡ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ. ನಾನು ಒಕ್ಕಲಿಗ ನಾಯಕನಾಗಿ ಹುಟ್ಟಿದ್ದೇನೆ. ಸಮುದಾಯಕ್ಕೆ ರಕ್ಷಣೆ ಕೊಡಬೇಕು. ಹೀಗಾಗಿ ಸಹಾಯ ಮಾಡುತ್ತೇನೆ. ಖಂಡಿತ ನನ್ನ ಕೈಲಾದ ಸೇವೆ ಮಾಡುತ್ತೇನೆ ಎಂದರು.
ಜೆಡಿಎಸ್ ಪಕ್ಷ, ಕುಟುಂಬದ ಬಗ್ಗೆ ಮಾತನಾಡಲ್ಲ. ಎಂತವರು ಕೂಡ ಹತಾಶರಾಗುತ್ತಾರೆ. ಬಿಜೆಪಿಗರು ಗಂಟೆಗೊಂದು ಗಳಿಗೆಗೊಂಡು ಮಾತನಾಡುತ್ತಾರೆ. ಗೃಹ ಸಚಿವರು ಇದ್ದಾರೆ, ಎಸ್ ಐಟಿ ಇದೆ. ಪ್ರಕರಣ ಸಂಬಂಧ ಎಲ್ಲದಕ್ಕೂ ಅವರೇ ಉತ್ತರ ಕೊಡುತ್ತಾರೆ. ನಾನು ಎಲೆಕ್ಷನ್ ಮೂಡ್ ನಲ್ಲಿ ಇದ್ದೇನೆ. ಯಾರ ಹತ್ತಿರವೂ ಮಾತನಾಡೋಕೆ ಟೈಮ್ ಸಿಗುತ್ತಿಲ್ಲ. ಏನಾದರೂ ಮಾಹಿತಿ ನೀಡಿದರೆ ಕೊಡಿ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: vokkaliga, leadership, DCM, DK Shivakumar