MYSORE BANGALORE EXPRESSWAY: ರಾಂಗ್ ರೂಟ್ ನಲ್ಲಿ ಬಸ್ ಓಡಿಸಿದ VRL ಚಾಲಕನ ಬಂಧನ.
ಮೈಸೂರು, ಆ.26,2024: (www.justkannada.in news) ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಸಂಚಾರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಆದಾಗ್ಯೂ ವಾಹನ ಸವಾರರು ಇದನ್ನು ಉಲ್ಲಂಘಿಸುತ್ತಲೇ ಇರುತ್ತಾರೆ. ಇಂಥದ್ದೆ ಒಂದು ಪ್ರಕರಣಕ್ಕೆ ಇದೀಗ ಪೊಲೀಸರು ಬಿಸಿ ಮುಟ್ಟಿಸಲು ಸಿದ್ದವಾಗಿದ್ದಾರೆ.
ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ ಬಸ್ ವೊಂದು ರಾಂಗ್ ಸೈಡ್ ನಲ್ಲಿ ಅತೀ ವೇಗವಾಗಿ ಸಂಚರಿಸುತ್ತಿದ್ದದ್ದನ್ನು ಎಂ.ನಾಗರಾಜನ್ ಎಂಬುವವರು ವಿಡಿಯೋ ಮಾಡಿ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಸಂಬಂಧಪಟ್ಟವರ ಗಮನ ಸೆಳೆದಿದ್ದರು.
ವೇಗವಾಗಿ ರಾಂಗ್ ರೂಟ್ ನಲ್ಲಿ ತೆರಳುತ್ತಿದ್ದ ಈ ವಾಹನದ ನಂಬರ್ ಪ್ಲೇಟ್ ಸೇರಿದಂತೆ ಯಾವುದೇ ಮಾಹಿತಿಯೂ ವಿಡಿಯೋದಲ್ಲಿ ಲಭ್ಯವಿರಲಿಲ್ಲ. ಆದರೂ ಈ ಪೋಸ್ಟ್ ಗೆ ಸ್ಪಂಧಿಸಿದ ಮಂಡ್ಯ ಪೊಲೀಸರು ಕಡೆಗೂ ವಾಹನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ಹೇಳಿರುವುದಿಷ್ಟು..
ಇದು ಕ್ರೂರ ಮತ್ತು ತುಂಬಾ ಅಪಾಯಕಾರಿ , ವಾಹನ ಸಂಖ್ಯೆ ಮತ್ತು ಇತರ ವಿವರಗಳು ಲಭ್ಯವಿಲ್ಲದಿದ್ದರೂ, ಮಂಡ್ಯ ಪೊಲೀಸರು ಬಸ್ ಅನ್ನು ಪತ್ತೆಹಚ್ಚಲು ಮತ್ತು ಕಠಿಣ ಕ್ರಮ ತೆಗೆದುಕೊಳ್ಳಲು ಗಂಭೀರ ಪ್ರಯತ್ನ ನಡೆಸಿದರು.
"ರಸ್ತೆ ಬಳಕೆದಾರರ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರುವ ಇಂತಹ ಉಲ್ಲಂಘನೆಗಳನ್ನು ಕ್ಷಮಿಸಲಾಗುವುದಿಲ್ಲ"
ಮಂಡ್ಯ ಪೊಲೀಸರು ವಿ.ಆರ್ .ಎಲ್ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಇದು ಎಂಎಚ್ ಹಾದುಹೋಗುವ ಬಸ್ ಆಗಿದ್ದು, ಪ್ರಸ್ತುತ ತಪ್ಪಿತಸ್ಥ ಚಾಲಕ ಬಸ್ ನೊಂದಿಗೆ ಮುಂಬೈನಲ್ಲಿದ್ದಾನೆ. ಚಾಲಕನನ್ನು ಮಂಗಳವಾರ ಪೊಲೀಸರ ಮುಂದೆ ಹಾಜರುಪಡಿಸಲಾಗುವುದು. ಅಪಾಯಕಾರಿ ಚಾಲನೆಗಾಗಿ ನಾವು ಪ್ರಕರಣ ದಾಖಲಿಸುತ್ತೇವೆ.
key words: MYSORE BANGALORE EXPRESSWAY, VRL DRIVER, ARRESTED, FOR DRIVING BUS, ON WRONG ROUTE.