ನಾವು ಯಾರನ್ನೂ ಕಾಂಗ್ರೆಸ್ ಪಕ್ಷಕ್ಕೆ ಕರೆಯಲ್ಲ: ಸಿದ್ಧಾಂತ ಒಪ್ಪಿ ಬಂದ್ರೆ ಸ್ವಾಗತ-ಸಿಎಂ ಸಿದ್ದರಾಮಯ್ಯ.
03:38 PM Nov 23, 2023 IST
|
prashanth
ಬಾಗಲಕೋಟೆ,ನವೆಂಬರ್,23,2023(www.justkannada.in): ನಾವು ಯಾರನ್ನೂ ಕಾಂಗ್ರೆಸ್ ಪಕ್ಷಕ್ಕೆ ಕರೆಯಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಅವರಾಗೇ ಬಂದರೇ ಸೇರಿಸಿಕೊಳ್ಳುತ್ತೇವೆ. ನಮ್ಮ ಪಕ್ಷ ಸಿದ್ದಾಂತ ಒಪ್ಪಿಕೊಂಡು ಬರಬೇಕು. ಪಕ್ಷದ ಸಿದ್ದಾಂತ ಒಪ್ಪಿ ಬಂದ್ರೆ ಸ್ವಾಗತ ಎಂದರು.
ಜಾತಿಗಣತಿಯಿಂದ ಸಮಾಜ ಒಡೆಯಲು ಹೊರಟಿದ್ದಾರೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ಧರಾಮಯ್ಯ, ಜಾತಿಗಣತಿ ವರದಿಯಲ್ಲಿ ಏನಿದೆ ಅಂತಾ ಹೆಚ್.ಡಿಕೆಗೆ ಗೊತ್ತಾ..? ಸಮಾಜ ಒಡೆಯುವುದು ಎಂಬುದು ರಾಜಕೀಯದ ಮಾತು ಎಂದು ಟಾಂಗ್ ಕೊಟ್ಟರು.
Key words: We - not -invited -anyone - Congress party-Welcome -CM Siddaramaiah.
Next Article