ನಾವು ಕೇಸ್ ರೀ ಓಪನ್ ಮಾಡಿಲ್ಲ: ಕೋರ್ಟ್, ಕಾನೂನಿಗೂ ಬಿಜೆಪಿ ಬೆಲೆ ಕೊಡುವುದಿಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್.
ಬೆಂಗಳೂರು,ಜನವರಿ,5,2024(www.justkannada.in): ದತ್ತಪೀಠ ಹೋರಾಟಗಾರರ ವಿರುದ್ಧದ ಪ್ರಕರಣವನ್ನು ರೀ ಓಪನ್ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾವು ಕೇಸ್ ರೀ ಓಪನ್ ಮಾಡಿಲ್ಲ ಪೊಲೀಸ್ ಠಾಣೆಯಲ್ಲಿ ಇರುವ ಪ್ರಕರಣಗಳ ವಿರುದ್ಧ ಅಧಿಕಾರಿ ಕ್ರಮ ತೆಗೆದುಕೊಳ್ಳಲು ಹೋದರೆ ರೀ ಓಪನ್ ಮಾಡಿದ್ದೀರಾ ಅಂತ ಕೇಳಿದರೆ ಹೇಗೆ? ಎಂದು ಪ್ರಶ್ನಿಸಿದರು.
ಈ ಕುರಿತು ಇಂದು ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಕೋರ್ಟ್ ಸೂಚನೆ ಕೊಟ್ಟಿದ್ದರೆ ನಾವು ಕೇಳಬಾರದಾ? ಬಿಜೆಪಿಯವರು ಕೋರ್ಟ್, ಕಾನೂನಿಗೂ ಬೆಲೆ ಕೊಡುವುದಿಲ್ಲ. 16 ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯ ವಿಷಯವನ್ನ ಇಡೀ ದೇಶದಲ್ಲಿ ದೊಡ್ಡದು ಮಾಡಲು ಹೊರಟಿದ್ದೀರಾ? ಬಿಜೆಪಿಯವರು ಅಪರಾಧಿಯನ್ನ ಬೆಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಅವರು, ಹೇಳುವುದಕ್ಕೂ ಒಂದು ಮಿತಿ ಇರಬೇಕು. ಇಂತಹ ವಿಷಯಗಳಲ್ಲಿ ನಾವು ನ್ಯಾಯವಾಗಿ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
Key words: We - not re-opened – case - Home Minister- Dr. G. Parameshwar.