For the best experience, open
https://m.justkannada.in
on your mobile browser.

ವಿ.ಸೋಮಣ್ಣರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ- ಮಾಜಿ ಸಿಎಂ ಬಿಎಸ್ ವೈ.

05:28 PM Nov 25, 2023 IST | prashanth
ವಿ ಸೋಮಣ್ಣರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ  ಮಾಜಿ ಸಿಎಂ ಬಿಎಸ್ ವೈ

ಬೆಂಗಳೂರು,ನವೆಂಬರ್,25,2023(www.justkannada.in): ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕ ಮಾಡಿದಕ್ಕೆ  ಮಾಜಿಸಚಿವ ವಿ.ಸೋಮಣ್ಣ ಅಸಮಾಧಾನಗೊಂಡಿರುವ ಕುರಿತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸೋಮಣ್ಣ ಜೊತೆ ಫೋನ್ ನಲ್ಲಿ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಆದರೆ ಸೋಮಣ್ಣ ಫೋನ್ ರಿಶೀವ್ ಮಾಡಲಿಲ್ಲ.  ವಿ.ಸೋಮಣ್ಣರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಬರಲಿಲ್ಲ ಅಂದ್ರೆ ನಾವು ಏನು ಮಾಡಲು ಆಗಲ್ಲ ಎಂದರು.

ನನಗೆ ಅನುದಾನ ತಪ್ಪಿಸಿದ್ದು ಬಿವೈ ವಿಜಯೇಂದ್ರ. ಹಾಗಾಗಿ ಅವರು ತನ್ನ ಮನೆಗೆ ಬರೋದು ಬೇಡ ಅಂತ  ಬಸನಗೌಡ ಪಾಟೀಳ್ ಯತ್ನಾಳ್  ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ, ಅವರ ಮನೆಗ ಹೋಗುತ್ತೇವೆ ಅಂದಿದ್ಯಾರು?' ಎಂದು ಮರುಪ್ರಶ್ನಿಸಿದರು.

Key words: We will -try - keep V. Somanna - party - former CM- BS yeddyurappa

Tags :

.