For the best experience, open
https://m.justkannada.in
on your mobile browser.

ಅಂತರ್ಜಾತಿ ದಂಪತಿ ನೊಂದಣಿಗೆ ವೆಬ್‌ ಸೈಟ್‌ : ಸಿಎಂ ಸಿದ್ದರಾಮಯ್ಯರಿಂದ ನಾಳೆ ಲೋಕಾರ್ಪಣೆ

04:55 PM May 22, 2024 IST | mahesh
ಅಂತರ್ಜಾತಿ ದಂಪತಿ ನೊಂದಣಿಗೆ ವೆಬ್‌ ಸೈಟ್‌   ಸಿಎಂ ಸಿದ್ದರಾಮಯ್ಯರಿಂದ ನಾಳೆ ಲೋಕಾರ್ಪಣೆ

ಮೈಸೂರು, ಮೇ.22, 2024: (www.justkannada.in news) ಇದೇ ಮೊದಲ ಬಾರಿಗೆ ಅಂತರ್ಜಾತಿ ವಿವಾಹವಾದ ದಂಪತಿಗಳ ನೊಂದಣಿಗೆ ಸ್ವಯಂ ಸೇವಾ ಸಂಸ್ಥೆಯೊಂದು ಮುಂದಾಗಿದೆ. ಈ ಸಂಬಂಧ ವೆಬ್‌ ಸೈಟ್‌ ಸಿದ್ಧಪಡಿಸಿದ್ದು, ಇದು ನಾಳೆ ಲೋಕಾರ್ಪಣೆಗೊಳ್ಳಲಿದೆ.

ಮೈಸೂರಿನ ಕುವೆಂಪುನಗರದ ಚಿಕ್ಕಮ್ಮನಿಕೇತನ ಕಲ್ಯಾಣ ಮಂಟಪದಲ್ಲಿ ನಾಳೆ ಸಂಜೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದು, ವೆಬ್‌ ಸೈಟ್‌ ಗೆ ಚಾಲನೆ ನೀಡುವರು.

ಜನಸ್ಪಂಧನ ಹಾಗೂ ಮಾನವ ಮಂಟಪದ ವತಿಯಿಂದ ಆಯೋಜಿಸಿರುವ ಅಂತರ್ಜಾತಿ ವಿವಾಹಿತರ ಸಭೆ ಹಾಗೂ ಅಂತರ್ಜಾತಿ ದಂಪತಿಗಳ ನೊಂದಣಿಗೆ ಸಮಾರಂಭದಲ್ಲಿ ಚಾಲನೆ ನೀಡಲಾಗುತ್ತದೆ.

ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌,  ಜಾತಿ,ಜಾತಿ ನಡುವಿನ ಕಲಹ ಜತೆಗೆ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿರುವ ಈ ವೇಳೆ ಅಂತರ್ಜಾತಿ ದಂಪತಿಗಳ ಸಭೆ ನಡೆಸುತ್ತಿರುವುದು ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಎಂಬ ಉದ್ದೇಶದಿಂದ ಎಂದರು.

key words:  Cm Siddaramaiah, to launch website, for inter-caste couple registration

summary: 

Contextual picture

This is the first time that an NGO has come forward to register inter-caste couples. A website has been prepared in this regard and it will be launched tomorrow.

Chief Minister Siddaramaiah will participate in a programme organized at Chikkamaniketana Kalyana Mantapa in Kuvempunagar here tomorrow evening and launch the website.

Tags :

.